ತಪ್ಪು ನೋಡದೆ
ಬಂದೆಯಾ ನನ್ನ ತಂದೆಯೆ
ಅಪ್ಪ
ತಿರುವೆಂಗಳೇಶನೆ ನಿರ್ದೋಷನೆ
ಆಪಾದಮೌಳಿ
ಎನ್ನೊಳು ಅಘ ಬಹಳ
ಶ್ರೀಪತಿ
ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ
ಜಗದಘಹರನೆಂಬುದು
ನಿನ್ನ ಬಿರುದು
ತ್ರಿಗುಣಾತೀತನೆ
ರಾಮನೆ ಗುಣಧಾಮನೆ
ಇನ್ನೆನ್ನ
ಕಲುಷವಾರಿಸೊ ಭವತಾರಿಸೊ
ಪ್ರಸನ್ನ ವೆಂಕಟರಮಣ ಭಯಶಮನ
ಸಾಹಿತ್ಯ: ಪ್ರಸನ್ನ ವೆಂಕಟದಾಸರು
Tag: Tappu Nodade Bandeya
ವೆಂಗಳೇಶ ಪದದ ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಜನಪ್ರಚಲಿತದಲ್ಲಿ ತಿರು ವೆಂಕಟೇಶ ಎಂದು ನಂಬಿಕೆಯಲ್ಲವೇ?
ಅಲ್ಲದೆ ಪ್ರಸನ್ನ ವೆಂಕಟಗಿರಿ ದಾಸರು ಬರೆದಿದ್ದಾರೆ