ಭಾನುವಾರ, ಮಾರ್ಚ್ 29, 2015

ಕೇಳನೋ ಹರಿ ತಾಳನೋ


ಕೇಳನೋ ಹರಿ ತಾಳನೊ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ

ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು

ತುಂಬುರು ನಾರದರ ಗಾನ ಕೇಳುವ ಹರಿ

ನಂಬಲಾರ ಈ ಢಂಬಕದ ಕೂಗಾಟ

ನಾನಾ ಬಗೆಯ ರಾಗ ಭಾವ ತಿಳಿದು
ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು

ದಾನವಾರಿಯ ದಿವ್ಯ ನಾಮ ರಹಿತವಾದ

ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

ಅಡಿಗಡಿಗಾನಂದ ಬಾಷ್ಪ ಪುಳಕದಿಂದ
ನಡೆ ನುಡಿಗೆ ಶ್ರೀ ಹರಿಯೆನ್ನುತ

ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ

ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ

ಸಾಹಿತ್ಯ: ಪುರಂದರದಾಸರು
Tag: Kelano hari taalanoಕಾಮೆಂಟ್‌ಗಳಿಲ್ಲ: