ಬುಧವಾರ, ಏಪ್ರಿಲ್ 13, 2016

ಪೋಗದಿರೆಲೊ ರಂಗ ಬಾಗಿಲಿಂದಾಚೆ


ಪೋಗದಿರೆಲೊ ರಂಗ ಬಾಗಿಲಿಂದಾಚೆ

ಭಾಗವತರು ಕಂಡು ಎತ್ತಿತ್ತಿಕೊಂಡೊಯ್ವರೊ


ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ

ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬುವರು


ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ

ಹಗೆಯಾಗಿ ನುಡಿವರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲೀತು ತನಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು


ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು

ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಸೃಷ್ಟೀಶ ಪುರಂದರ ವಿಠ್ಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ರಂಗಯ್ಯ


ಸಾಹಿತ್ಯ: ಪುರಂದರದಾಸರು

ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಎಸ್. ಜಾನಕಿ
ಕಾಮೆಂಟ್‌ಗಳಿಲ್ಲ: