ರಾಗರತಿ
ರಾಗರತಿ
ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
- ಆಗ – ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತs
ಬಿದಿಗೆ ಚಂದ್ರನಾ ಚೊಗಚೀ – ನಗಿ –
ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.
ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.
ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತs
ಮತಮತ ಬೆರಗಿಲೆ ಬಿಡತ್ತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ.
ಸಾಹಿತ್ಯ: ಅಂಬಿಕಾತನಯದತ್ತ
ರಾಗರತಿಯ ನಂಜೇರಿದ ಹಾಡು. ಸಾಯಂಕಾಲ ಒಬ್ಬ ಹೆಣ್ಣು ಮಗಳು ಬಾವಿ ನೀರಿಗೆ
ಹೋಗಿ ಮನೆಯತ್ತ ಮರಳುವ ಚಿತ್ರ. ಸಂಧ್ಯಾಕಾಲದ ಸಮಯವು ಇಂಥ ಸಂದರ್ಭದಲ್ಲಿ ಮನಸ್ಸಿನಲ್ಲಿ
ಉಂಟುಮಾಡುವ ವಿಚಾರಗಳ ತಾಕಲಾಟವನ್ನು ಕವಿ ಉಪಮಾ, ಉತ್ಪ್ರೇಕ್ಷೆಗಳಿಂದ
ವರ್ಣಿಸಿದ್ದಾರೆ.
Tag: Raagarati, Mugila maarige raaga ratiya nanja erittaa
ಕಾಮೆಂಟ್‌ಗಳು