ಅಕೋ ಶ್ಯಾಮ ಅವಳೇ ರಾಧೆ
ಅಕೋ
ಶ್ಯಾಮ ಅವಳೇ ರಾಧೆ
ನಲಿಯುತಿಹರು
ಕಾಣಿರೇ |
ನಾವೆ
ರಾಧೆ ಅವನೇ ಶ್ಶಾಮ
ಬೇರೆ
ಬಗೆಯ ಮಾಣಿರೇ ||
ಕಲರವದೊಳು
ಯಮುನೆ ಹರಿಯೆ
ಸೋಬಾನೆಯ
ತರುಗಳುಲಿಯೆ
ತೆನೆತೆನೆಯೊಳು
ಹರಸಿದಂತೆ
ಬಾನಿಂ
ಜೊನ್ನ ಭೂಮಿಗಿಳಿಯೆ ||
ಕಂಪ
ಬಿಡುವ ದಳಗಳಂತೆ
ಸುತ್ತಲರಳಿ
ಕೊಳ್ಳಿರೇ|
ಒಲುಮೆಗಿಡುವ
ಪ್ರಭಾವಳಿಯ
ತೆರದಿ
ಬಳಸಿ ನಿಲ್ಲಿರೇ ||
ಕಡಗ
ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ
ಝಣರೆನೆ |
ಎದೆ
ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ
ಕುಣಿವನೆ ||
ನಮ್ಮ
ಮನವ ಕೋದು
ಮಾಲೆ
ಗೈದು ಮುಡಿಯುತಿಹನೆನೆ |
ಮಾಧವನೂದುವ
ಮಧುರ ಗಾನ
ಎದೆಯ
ಹಾಯ್ವುದಾಯೆನೆ ||
ನೋಡಿ
ತಣಿಯೆ ಹಾಡಿ ತಣೆಯೆ
ಲೇಸನಾಡಿ
ತಣಿಯೆನೆ |
ಕುಣಿದು
ತಣಿಯೆ ದಣಿದು ತಣಿಯೆ
ದಣಿವಿಲ್ಲದೆ
ನಲಿವೆನೆ ||
ಸಾಹಿತ್ಯ: ಪು.ತಿ.ನ.
Tag: Ako Shyama Avale Radhe
ಕಾಮೆಂಟ್‌ಗಳು