ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತ್ಯಮೇವ ಜಯತೆ



ಜಯತೇ, ಜಯತೇ, ಜಯತೇ,
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...

ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ,
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ..
ಕೆಡುಕ ಬಯಸೆ ಕೆಡುವೆ ಖಚಿತ...
ಕೆಡುಕ ಬಯಸೆ ಕೆಡುವೆ ಖಚಿತ, ಪಡೆವೆ ನೋವು ಖಂಡಿತ..
ಸತ್ಯವಾದ ಘನತೆ ಸೋಲೇ ಕಾಣದಂತೆ..

ಮಧುವಿಗಿಂತ ಮದುರವಾದ ಮಾತು ಮನಸು ಕಾಯಕ,
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ..
ಉಳಿಸಿಕೊಳ್ಳಿ ಹಿರಿಯ ನಡತೆ...
ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ..
ಸತ್ಯವಾದ ಘನತೆ ಸೋಲೇ ಕಾಣದಂತೆ..

ಮಧುರ ಭಾವ ತುಂಬಿದಂಥ ಮನಸೇ ದೇವಮಂದಿರ,
ಸಾತ್ವಿಕನಿಗೆ ನಿಲುಕದಂಥ ನಿಧಿಯೇ ಇಲ್ಲ ಬಲ್ಲಿರಾ..
ಸರಳಜೀವಿಗೆಂದಿಗೂ..
ಸರಳಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರ...
ಸತ್ಯವಾದ ಘನತೆ ಸೋಲೇ ಕಾಣದಂತೆ..

ಆಸೆ ಫಲಿಸದೇನೋ ಎಂದು ಅಳುಕಲೇಕೆ ಅಳ್ಳೆದೆ,
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಯದೆ..
ಆತ್ಮಶಕ್ತಿಗಿಂತ ಬೇರೆ..
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ...
ಸತ್ಯವಾದ ಘನತೆ ಸೋಲೇ ಕಾಣದಂತೆ..

ಸಾಹಿತ್ಯ: ಕು. ರಾ. ಸೀತಾರಾಮ ಶಾಸ್ತ್ರಿ
ಸಂಗೀತ: ಜಯದೇವ್
ಗಾಯನ: ಮನ್ನಾಡೇ, ಅಂಬರ ಕುಮಾರ್, ಕೃಷ್ಣಾ ಕಾಳೆ



Tag: Jayate Jayate, Satyameva Jayate

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ