ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ


ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮ

ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ
ಅಲೆಯಲ್ಲಿ ತೇಲಿ ತೇಲಿದೆ

ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ
ಹಾಯಾಗಿ ತೂಗಿ ತೂಗುವೆ

ಚಿತ್ರ: ವಿಜಯವಾಣಿ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್ ಜಾನಕಿ ಮತ್ತು ವಾಣಿ ಜಯರಾಂ

ಇಲ್ಲಿ ಕೇಳಿ

Tag: Madhumaasa chandrama naidhilege sambhrama

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ