ನೀನೆ ಅನಾಥಬಂಧು ಕಾರುಣ್ಯಸಿಂಧು
ನೀನೆ ಅನಾಥಬಂಧು ಕಾರುಣ್ಯಸಿಂಧು
ಮದಗಜವೆಲ್ಲ ಕೂಡಿದರೇನು
ಅದರ ಸಮಯ ಒದಗಲಿಲ್ಲ
ಅದರ ಸಮಯ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ
ಪತಿಗಳೈವರಿದ್ದರೇನು
ಸತಿಯ ಭಂಗ ಬಿಡಿಸಲಿಲ್ಲ
ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ
ಶಿಲೆಯ ಮೆಟ್ಟಿ ಕುಲಕೆ ತಂದೆ
ಬಲಿಯ ಬೇಡಿ ಸತ್ಪದವಿಯನಿತ್ತೆ
ಸುಲಭದಿಂ ಭಜಿಸುವ ಭಕ್ತರ ಸಲುಹುವ
ನಮ್ಮ ಚೆಲುವ ಪುರಂದರವಿಟ್ಠಲರಾಯ
ನಮ್ಮ ಚೆಲುವ ಪುರಂದರವಿಟ್ಠಲರಾಯ
ಸಾಹಿತ್ಯ: ಪುರಂದರದಾಸರು
Tag: Neene Anatha Bandhu
Tag: Neene Anatha Bandhu
ಕಾಮೆಂಟ್‌ಗಳು