ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ 
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ

ಬಾಲ್ಯದ ಆಟ, ಆ ಹುಡುಗಾಟ, ಇನ್ನೂ ಮಾಸಿಲ್ಲ
ಆಟದೆ ಸೋತು, ರೋಷದೆ ಕಚ್ಚಿದ;
ಗಾಯವ ಮರೆತಿಲ್ಲ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ

ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ 
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ
ನಾನದ ಮರೆಯುವೆನೆ?
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ

ಸಂಗವ ಬಿಟ್ಟು ಜಗಳ ಆಡಿದ ದಿನವಾ ಮರೆತಿಲ್ಲ
ಮಳೆಯಲಿ ನನ್ನಾ ಮೋರಿಗೆ ತಳ್ಳಿದ ತುಂಟಿಯ ಮರೆತಿಲ್ಲ
ನಾನದ ಮರೆಯುವೆನೇ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ

ಚಿತ್ರ: ಶುಭಮಂಗಳ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್


Tag: Snehada kadalalli nenapina doniyali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ