ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ನೇಹಿತರೇ ನಿಮಗೆ ಸ್ವಾಗತ,

ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ,
ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ,
ನನ್ನೆದೆಯಾ ಪ್ರೀತಿ ಸ್ವಾಗತ

ರಸಪೂರ್ಣ ರಂಗಾದ ಸಂಜೆಯಲ್ಲಿ,
ಸವಿ ಸ್ನೇಹ ತಂದಂಥ ವೇಳೆಯಲ್ಲಿ
ನಾ ಹಾಡುವಾ ಈ ಹಾಡಿನಾ,
ತಾಳ ಮೇಳ ಸೇರಿ ನಿಮ್ಮ ತೂಗಲೀಗ.
ಕ್ಷಣ ಒಂದು ಕಣ್ಣೋಟ ಸೇರಿದಾಗ,
ಸವಿಮಾತು ತಮ್ಮಲ್ಲೇ ಆಡಿದಾಗ
ಆ ಮೋಹದಾ ಪಿಸು ಮಾತಿಗೆ
ಸಾಟಿಯಾದ ಯಾವ ಪ್ರೇಮಕಾವ್ಯವಿಲ್ಲ.
ಹೃದಯ ಹಗುರಾಗಿ ಇರಲಿ,
ಪ್ರೀತಿ ವಾತ್ಸಲ್ಯ ನಗಲಿ

ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ,
ಒಲಿದಂಥ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದಾ ಸಂಬಂಧವೂ
ತರುವಂಥ ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೇಯಸಿಯು ತೋರುವ ಪ್ರೀತಿ,
ನಿಜ ಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ,  ವಿಶ್ವಾಸವೂ,
ಬಾಳಲ್ಲಿ ಇರಲೆಂದೂ ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ,
ಪ್ರೀತಿ ವಾತ್ಸಲ್ಯ ನಗಲಿ

ಸಾಹಿತ್ಯ:  ಆರ್. ಎನ್. ಜಯಗೋಪಾಲ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್ ಪಿ. ಬಾಲಸುಬ್ರಮಣ್ಯಮ್


Tag: Snehitare nimage swagatha, snehitare nimage svaagata

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ