ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾರಿ ಕಾಣದಾಗಿದೆ ರಾಘವೇಂದ್ರನೆ

ದಾರಿ ಕಾಣದಾಗಿದೆ ರಾಘವೇಂದ್ರನೆ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ
ದಾರಿ ಕಾಣದಾಗಿದೆ ರಾಘವೇಂದ್ರನೆ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ
ದಾರಿ ಕಾಣದಾಗಿದೆ ರಾಘವೇಂದ್ರನೆ

ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ
ಕಲ್ಲು ಮುಳ್ಳು ಏನೆ ಇರಲಿ ಬಾಳ ಹಾದಿಲಿ
ನಿನ್ನ ಕರುಣೆ ಇಂದ ಎಲ್ಲ ಸುಮಗಳಾಗಲಿ

ಯಾರ ಯಾರ ಸೇರಿಸುವೆಯೊ ಯಾರೂ ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು
ನೀನು ಕುಣಿಸಿದಂತೆ ತಾನೆ ಎಲ್ಲ ಕುಣಿವರು
ಜ್ಯೋತಿ ನೀನು ಬರಿಯ ಮಣ್ಣ ಹಣತೆ ಎಲ್ಲರು

ಚಿತ್ರ: ದೀಪಾ
ಸಾಹಿತ್ಯ : ಚಿ. ಉದಯಶಂಕರ
ಸಂಗೀತ: ವಿಜಯ ಭಾಸ್ಕರ್

ಗಾಯನ: ವಾಣಿಜಯರಾಂ


Tag: Daari kanadaagide raghavendane

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ