ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಒಮ್ಮೆ
ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ
ಬಾನಲ್ಲೋ ಇನ್ನೆಲ್ಲೋ ನಾ ಕಾಣೇ
ಒಮ್ಮೆ
ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಅರಳಿರುವ
ಹೂವಿನಲ್ಲಿ ನಿನ್ನ ನೋಟವಾ
ಹರಿಯುತಿಹ
ನೀರಿನಲ್ಲಿ ನಿನ್ನ ಓಟವಾ
ಇಂಪಾದ
ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ
ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ
ನಾಟ್ಯದಲ್ಲಿ ನಿನ್ನ ಚಂದವಾ
ತಂಪಾದ
ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ
ನಾ ಕಂಡೆ, ನಾ ಕಂಡು ಬೆರಗಾದೆ...
ಒಮ್ಮೆ
ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಮಿನುಗುತಿಹ
ತಾರೆಯೆಲ್ಲ ನಿನ್ನ ಕಂಗಳೋ
ನಗುತಿರಲು
ಭೂಮಿಗೆಲ್ಲ ಬೆಳದಿಂಗಳೋ
ಆ
ಬೆಳ್ಳಿ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ
ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ
ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ
ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ
ಯಾರಿಲ್ಲ ನಿನ್ನಲ್ಲೇ ಮನಸೆಲ್ಲಾ...
ಒಮ್ಮೆ
ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ
ಬಾನಲ್ಲೋ ಇನ್ನೆಲ್ಲೋ ನಾ ಕಾಣೇ
ಒಮ್ಮೆ
ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಚಿತ್ರ: ಗಾಳಿಮಾತು
ಸಾಹಿತ್ಯ:
ಚಿ.ಉದಯಶಂಕರ್
ಸಂಗೀತ:
ರಾಜನ್ ನಾಗೇಂದ್ರ
ಗಾಯನ:
ಎಸ್ ಜಾನಕಿ
Tag: Omme ninnannu kantumba, omme ninnannu kantumbaa
ಕಾಮೆಂಟ್‌ಗಳು