ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಮರವೆಲ್ಲೋ ಕೋಗಿಲೆ ಎಲ್ಲೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ

ಹುಣ್ಣಿಮೆಯಲ್ಲಿ ತಣ್ಣನೆ ಗಾಳೀ
ಬೀಸಲು ನಿನ್ನಾ ನೆನಪಾಗುವುದು
ದಿನರಾತ್ರಿಯಲೀ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ

ಚಿತ್ರ: ದೇವರಗುಡಿ
ರಚನೆ:ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

Tag: Mamaravello kogileyello 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ