ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೇವಂತಿಗೆಯ ಹಾಡು

ಸೇವಂತಿಗೆಯ ಹಾಡು

 ಉದಯಾಸ್ತಗಳ ನಡುವೆ ನಡೆವ ಈ ಪಯಣದಲಿ
ನೀವೇಕೆ ಹೀಗೆನ್ನ ನೋಡುತಿಹಿರಿ?
ನನ್ನ ನೆರಳಿನ ಮೇಲೇ ನಾನು ನಿಂತಿರುವಾಗ
ಪ್ರೇಮ ಗೀತೆಯ ನೀವು ಹಾಡುತಿಹಿರಿ || 

ಇರುವುದನು ತೆಗೆದುಕೊ ಇರದುದಕೆ ಕೊರಗದಿರು
ಎಂದೇಕೆ ನೀವಿಂದು ಹೇಳುತಿಹಿರಿ
ಇದು ಕಾಲವಲ್ಲ ಮಲ್ಲಿಗೆಗೆ ಎನ್ನುತ್ತೀರಿ
ಸೇವಂತಿಗೆಯ ತಂದು ತುಂಬುತಿಹಿರಿ |||| 

ನೆನಪಿದೆಯೆ ನಿಮಗೆ ಸೇವಂತಿಗೆಯ ತೋಟದಲಿ
ಹೂವಿನೊಂದಿಗೆ ನೀವು ಕೊಟ್ಟ ಮುತ್ತು?
ಮುಗಿಲಿನೆತ್ತರದಲ್ಲಿ ಬೆಳ್ಳಕ್ಕಿ ಹಾರಾಡಿ
ನಿಮ್ಮ ಒಲವಿನ ಮುತ್ತು ಬೆಚ್ಚಗಿತ್ತು |||| 

ಬೆರಳಗಲ ದಾರಿಯಲಿ ನಾವು ಹೊರಟಿದ್ದೇವೆ
ಹುತ್ತಗಳ ದಾಟುತ್ತ ತೋಪಿನಲ್ಲಿ
ನಮ್ಮನ್ನು ತಡೆವವರು ಇಲ್ಲಿ ಯಾರಿದ್ದಾರೆ
ತಂಪೆಲರು ಬೀಸುತಿದೆ ಸಂಜೆಯಲ್ಲಿ ||||
  
ನೀವು ಎಲ್ಲಿಗೆ ಎಂದು ಕೇಳುವವರೆ ಇಲ್ಲ
ರೋಹಿಣಿಯು ಬಂದಿತ್ತು ಚಂದ್ರನೆಡೆಗೆ
ನಿಮ್ಮ ಹಾಡಿಗೆ ನಾನು ದನಿಯ ಸೇರಿಸಲೇನು?
ಎಂಥ ಹೂ ನಾ ಮುಡಿದ ಸೇವಂತಿಗೆ |||| 

ಸಾಹಿತ್ಯ: ಕೆ ಎಸ್ ನರಸಿಂಹಸ್ವಾಮಿ

ಚಿತ್ರಕೃಪೆ: ಹರಿಪ್ರಸಾದ್ ನಾಡಿಗ್


Tag: Sevantigeya hadu, sevantigeya haadu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ