ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರೆದರೂ ಕೇಳದೆ

ಕರೆದರೂ ಕೇಳದೆ
ಸುಂದರನೆ,  ಏಕೆ  ನನ್ನಲ್ಲೀ ಈ ಮೌನಾ
ಕರೆದರೂ ಕೇಳದೆ
ಸುಂದರನೇ ಏಕೆ, ನನ್ನಲ್ಲೀ ಈ ಮೌನಾ...

ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೆ, ಸೇರದೆ
ಏಕೆ ನನ್ನಲ್ಲೀ ಈ ಮೌನಾ…,  ಕರೆದರೂ ಕೇಳದೆ

ಈ ನನ್ನ ಅಂದ  ಚೆಂದ ನೀ ಕಾಣಲೆಂದೆ
ಈ ನನ್ನ ಗಾನ  ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರ ಬಂದಾಗ
ಕಲ್ಲೆದೆ ನಿನ್ನದೇ, ಏಕೆ ನನ್ನಲ್ಲಿ ಈ ಮೌನಾ....
ಕರೆದರೂ ಕೇಳದೆ
ಪರಶಿವನೆ ಏಕೆ, ನನ್ನಲ್ಲೀ ಈ ಮೌನಾ….
ಕರೆದರೂ ಕೇಳದೆ
  
ಮಿಂ ಮಿಂ ಧ್ವನಿ  ಮೃದಂಗ ಕೇಳದೆ
ಕೊರಳ ನಾಗ  ನಲಿದಾಡಲು ನೋಡದೆ
ಮಾಘ ಮಾಮರಿ ಗರಗರ ಕಾಣದೆ
ಶರ ಖೂಲ ಡಮರುಗ  ಮೆರೆದಾಡಿ
ಶಿವ ಚಂಚಂಚಂ ತತೋಂ

ಚಿತ್ರ: ಸನಾದಿ ಅಪ್ಪಣ್ಣ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಎಸ್. ಜಾನಕಿ
ಶಹನಾಯ್ ವಾದನ: ಭಾರತರತ್ನ ಬಿಸ್ಮಿಲ್ಲಾ ಖಾನ್
Tag: Karedaru kelade, karedaroo kelade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ