ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನು ನೀನೂ ಜೊತೆಯಿರಲೂ

ನಾನು ನೀನೂ ಜೊತೆಯಿರಲು
 ಕಾಲದ ನೆನಪೇ ಬೇಕಿಲ್ಲ
ಋತುಗಳೂ ಕಾಲದ ಮಾತುಗಳು
 ಅವುಗಳ ಭೇದವೇ ನಮಗಿಲ್ಲ
ನಾನು ನೀನೂ

ಕಣ್ಣು ಕಣ್ಣು ಕಲೆತಿರಲೂ
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲೂ
ಮಧುಮಾಸವೇ ಪ್ರತಿಕ್ಷಣವೆಲ್ಲ.

ಮನಸೂ ಮನಸೂ ಬೆರೆತಿರಲೂ
ಅಂದವೆ ನೋಡಿದ ಕಡೆಯೆಲ್ಲಾ
ತನುವೂ ತನುವೂ ಬೆಸೆದಿರಲೂ
ಸ್ವರ್ಗವೇ ನಮಗೆ ಬಾಳೆಲ್ಲ

ಸರಸದಿ ವೇಳೆಯು ಕಳೆದಿರಲೂ
ಬರಿಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ
ಹರುಷವೂ ನಮಗೆ ಬದುಕೆಲ್ಲ.

ಒಲವಿನ ಗೀತೆಯಾ ಹಾಡುತಿರೇ
ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸವಿಯನು ಸವಿಯುತಿದೇ
ಬಾಳಿನ ಜೋಡಿಯ ಕಣ್ಣುಗಳೂ

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಾನ: ಪಿ ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


Tag: Nanu ninu joteyiralu, naanoo neenoo joteyiraloo,  jotheyiralu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ