ಪರಾಗ
ಪರಾಗ
ಭಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೆ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೆ?
ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ-
ರಂದದೊಳಡಗಿಹುದು.
ಕವನ ಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು.
ಸಾಹಿತ್ಯ: ಅಂಬಿಕಾತನಯದತ್ತ
ಭಾವ: ಕಾವ್ಯ ಪರಾಗವು ರಸಿಕಭ್ರಮರಿಗಾಗಿಯೇ ಕಾಯ್ದುಕೊಂಡಿದೆ
Tag: Paraaga
Tag: Paraaga
ಕಾಮೆಂಟ್‌ಗಳು