ಯುಗ ಯುಗಗಳೆ ಸಾಗಲಿ
ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೆ ಬೀಳಲಿ, ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ, ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ
ನಡುಗಲಿ ಭುವಿ ಬಿರಿಯಲಿ, ನೀನೆ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ
ಭಾವ
ಒಲವಿಂದು ತುಂಬಿ ಬಂದು, ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು, ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೆ, ಈ ದೂರವೇಕೇ?
ಭಯವ ಬಿಡು ನೀನು, ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು, ಬದುಕಲ್ಲಿ
ತಂಗಾಳಿ ತಂದೆ
ಅಮರ ಈ ಪ್ರೇಮ, ಬರಲಾರದೆಂದೆಂದು ಸಾವು
ದಹಿಸು ಈ ಮೌನ, ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ, ಈ ಲೋಕವೇ ನೂಕಲಿ
ಎಂದೆಂದೂ ಸಂಗಾತಿ, ನೀನೇ
ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೆ ಬೀಳಲಿ, ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ, ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ
ಚಿತ್ರ: ಹೃದಯಗೀತೆ
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
Tag: Yuga Yugagale sagali
ಕಾಮೆಂಟ್‌ಗಳು