ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನವಿಲಿನಂತೆ ಹರುಷದಿಂದ


ನವಿಲಿನಂತೆ ಹರುಷದಿಂದ ಆಟ ಆಡುವಾ
ಹೆಜ್ಜೆ ಇಕ್ಕಿ ತಾಳ ಹಾಕಿ ಕುಣಿವ ಬಾರೆ ಬಾ

ಕರಿಯ ಮೋಡ ಮಳೆಯ ಸುರಿದು
ನೆಲಕೆ ನೀರ ಥಳಿಯ ಹೊಡೆದು
ಗಾಳಿಯಲ್ಲಿ ತೇಲಿ ಮತ್ತೆ ಮುಂದೆ ಸಾಗಿದೆ
ಎಲ್ಲ ಎಲೆಗಳಂಚಿನಲ್ಲಿ 
ನಿಂತ ನೀರ ಹನಿಗಳಲ್ಲಿ
ಬಿಸಿಲ ಕಿರಣ ಮಿಂಚಿ ಮುತ್ತಿನಂತೆ ತೋರಿದೆ

ಬಣ್ಣದೊಡವೆ ತೊಟ್ಟ ಹಾಗೆ
ಬಳ್ಳಿತುಂಬಾ ಹೂವು ಬಿಟ್ಟು
ತರುವನಪ್ಪಿ ಮೇಲೆ ಏರಿ ತಲೆಯ ತೂಗಿದೆ
ಹಣ್ಣು ಬಿಟ್ಟ ಗಿಡದ ರೆಂಬೆ
ನೆಲವ ಮುಟ್ಟಬಯುಸುತಿಹುದು
ಎಂಬುವಂತೆ ಭಾರದಿಂದ ಕೆಳಗೆ ಬಾಗಿದೆ

ಚಿಲಿಲಿ ಎಂದು ಉಲಿವ ಹಕ್ಕಿ
ಬಾನಿನಲ್ಲಿ ಹಾರುತಿರಲು
ನೋಡಿ ಮನವು ಮೊದಗೊಂಡು ಉಕ್ಕಿಬರುತಿದೆ
ಮನದ ಹಕ್ಕಿಗೆರಡು ಪಕ್ಕ
ಮೂಡಿದಂತೆ ಭಾಸವಾಗಿ
ಮುಗಿಲಿಗೇರಿ ಸೊಗವ ಸವಿದು ಧರೆಯ ಮರೆತಿದೆ.

ಸಾಹಿತ್ಯ: ವಿ. ಸಿ. ಐರಸಂಗ

Photo Courtesy: soundsofsilence-shalini.blogspot.com

Tag: Navilinante harushadinda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ