ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಣ್ಣ ಮುಚ್ಚಿ ಕುಳಿತರೆ


ಕಣ್ಣ ಮುಚ್ಚಿ ಕುಳಿತರೆ 
ಕಾಣುವೆ ನೀವೊಬ್ಬನೆ ಶಿವನೆ  
ಕಣ್ಣ ಬಿಟ್ಟು ನೋಡಲು 
ಕಾಣ್ವರು ನೂರಾರು ಶಿವರು ಶಿವನೆ

ನೈವೇದ್ಯ ನೇಮದಲಿ ನಿನ್ನ ಮುಂದಿಟ್ಟೆ
ಆ ತಟ್ಟೆಯಲ್ಲಿ ನಾ ಕಂಡೆ ನೂರಾರು ಬರಿ ಹೊಟ್ಟೆ
ಆ ಹೊಟ್ಟೆ ಕಾಣುವುದೆಂದೊ 
ಅನ್ನ ತುಂಬಿದ ತಟ್ಟೆ ಶಿವನೆ

ಉಟ್ಟಿರುವೆ ನೀನು ಪಟ್ಟು ಪೀತಾಂಬರ
ಪೀತಾಂಬರದೆ ನಾ ಕಂಡೆ ಚಿಂದಿವುಟ್ಟ ಬಡ ಜನರ
ಆ ಚಿಂದಿವುಟ್ಟ ವೊಡಲಿಗೆ ಎಂದೊ ಪಟ್ಟು ಪೀತಾಂಬರ
ಶಿವನೆ
ಪಟ್ಟು ಪೀತಾಂಬರ

ಗುಡಿಯಲ್ಲಿ ಬೆಚ್ಚಗೆ ಬಾಯ್ ಮುಚ್ಚಿ ಕುಳಿತಿರುವೆ
ಗುಡಿಸಲೂ ಇಲ್ಲದ ದೀನರ ಮರೆತಿರುವೆ
ಆ ದೇವರಿಗೆಲ್ಲಾ
ಬೆಚ್ಚನೆಯ ಗುಡಿಯೆಂದೊ
ಶಿವನೆ
ಬೆಚ್ಚನೆಯ ಗುಡಿಯೆಂದೊ


ಚಿತ್ರ: ಪಡುವಾರಹಳ್ಳಿ ಪಾಂಡವರು
ರಚನೆ: ಸೋರಟ್ ಅಶ್ವಥ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
Tag: Kanna mucchi kulitare

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ