ಕೋಡಗಾನ ಕೋಳಿ ನುಂಗಿತ್ತ
ಕೋಡಗಾನ ಕೋಳಿ
ನುಂಗಿತ್ತ
ನೋಡವ್ವ ತಂಗಿ
ಕೋಡಗಾನ ಕೋಳಿ ನುಂಗಿತ್ತ
ನೋಡವ್ವ ತಂಗಿ
ಕೋಡಗಾನ ಕೋಳಿ ನುಂಗಿತ್ತ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ
ಮದ್ದಲಿ ನುಂಗಿತ್ತ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ
ಮದ್ದಲಿ ನುಂಗಿತ್ತ
ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ನೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತ
ಕಲ್ಲು ಗೂಟವ ನುಂಗಿ
ನೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತ
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನನ್ನೆ
ಮಣಿಯು ನುಂಗಿತ್ತ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನನ್ನೆ
ಮಣಿಯು ನುಂಗಿತ್ತ
ಎತ್ತು ಜತ್ತಗಿ ನುಂಗಿ
ಬತ್ತ ಬಾಣವ ನುಂಗಿ
ಮುಕ್ಕುಟ ತಿರುವೊ ಅಣ್ಣನನ್ನ
ಕುಣಿಯು ನುಂಗಿತ್ತ
ಬತ್ತ ಬಾಣವ ನುಂಗಿ
ಮುಕ್ಕುಟ ತಿರುವೊ ಅಣ್ಣನನ್ನ
ಕುಣಿಯು ನುಂಗಿತ್ತ
ಗುಡ್ಡ ಗವಿಯನ್ನು ನುಂಗಿ
ಗವಿಯ ಇರುವೆಯು ನುಂಗಿ
ಗೋವಿಂದ ಗುರುವಿನ ಪಾದ
ನನ್ನನೆ ನುಂಗಿತ್ತ
ಗವಿಯ ಇರುವೆಯು ನುಂಗಿ
ಗೋವಿಂದ ಗುರುವಿನ ಪಾದ
ನನ್ನನೆ ನುಂಗಿತ್ತ
ಸಾಹಿತ್ಯ: ಶಿಶುನಾಳ ಷರೀಫ್ ಸಾಹೇಬರು
ಸಂಗೀತ: ಸಿ. ಅಶ್ವಥ್
Tag: Kodagaana koli nungitta
ಕಾಮೆಂಟ್‌ಗಳು