ಬಣ್ಣಾ ನನ್ನ ಒಲವಿನ ಬಣ್ಣಾ
ಬಣ್ಣಾ ನನ್ನ ಒಲವಿನ ಬಣ್ಣಾ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣಾ
ಬಣ್ಣಾ, ಬಣ್ಣಾ, ಬಣ್ಣಾ, ಬಣ್ಣಾ
ಈ ನೀಲಿ ಮೋಹಕ ಕಣ್ಣ, ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ, ಆ ಸಂಜೆ ಓಕುಳಿ ಬಣ್ಣ
ನೀ ತಂದೆ ಬಾಳಲಿ ಇಂದು, ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲೀ, ಹೊಸ ಪ್ರೇಮ ಹೂವಿನ ಬಣ್ಣ
ಬಾನಿನಿಂದ ಜಾರಿ ಬಂದ ಕಾಮನಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಂದು
ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನೋ ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಬಣ್ಣಾ, ಬಣ್ಣಾ , ಬಣ್ಣಾ, ಬಣ್ಣಾ
ಕರಿ ಮೋಡಕಿಂತ ಸೊಗಸು, ಮುಂಗುರಳ ಮೋಹಕ ಬಣ್ಣಾ
ಸಿರಿಗಂಧಕಿಂತ ಚೆಲುವೂ ನಿನ್ನೊಡಲ ಕಾಂತಿಯ ಬಣ್ಣ.
ನೊರೆಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೇ ತಂಪಾದ ಮಾತಿನ ಬಣ್ಣ
ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಯದಲ್ಲಿ ಮಾಸದಂತ ಗಟ್ಟಿ ಬಣ್ಣವು
ಬಣ್ಣಾ, ಬಣ್ಣಾ, ಬಣ್ಣಾ,
ಚಿತ್ರ: ಬಂಧನ
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣಾ
ಬಣ್ಣಾ, ಬಣ್ಣಾ, ಬಣ್ಣಾ, ಬಣ್ಣಾ
ಈ ನೀಲಿ ಮೋಹಕ ಕಣ್ಣ, ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ, ಆ ಸಂಜೆ ಓಕುಳಿ ಬಣ್ಣ
ನೀ ತಂದೆ ಬಾಳಲಿ ಇಂದು, ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲೀ, ಹೊಸ ಪ್ರೇಮ ಹೂವಿನ ಬಣ್ಣ
ಬಾನಿನಿಂದ ಜಾರಿ ಬಂದ ಕಾಮನಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಂದು
ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನೋ ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಬಣ್ಣಾ, ಬಣ್ಣಾ , ಬಣ್ಣಾ, ಬಣ್ಣಾ
ಕರಿ ಮೋಡಕಿಂತ ಸೊಗಸು, ಮುಂಗುರಳ ಮೋಹಕ ಬಣ್ಣಾ
ಸಿರಿಗಂಧಕಿಂತ ಚೆಲುವೂ ನಿನ್ನೊಡಲ ಕಾಂತಿಯ ಬಣ್ಣ.
ನೊರೆಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೇ ತಂಪಾದ ಮಾತಿನ ಬಣ್ಣ
ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಯದಲ್ಲಿ ಮಾಸದಂತ ಗಟ್ಟಿ ಬಣ್ಣವು
ಬಣ್ಣಾ, ಬಣ್ಣಾ, ಬಣ್ಣಾ,
ಚಿತ್ರ: ಬಂಧನ
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ
Tag: banna nanna olavina banna
ಕಾಮೆಂಟ್‌ಗಳು