ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಂಗವಲ್ಲಿ




ರಂಗವಲ್ಲಿ ಇಕ್ಕುತಾರೆ
ಪುಟ್ಟು ಪದ್ದು ಶಾರದೆ!
ಮಕ್ಕಳಾಟ ಎಷ್ಟು ಚಂದ -
ಬಂದು ನೋಡಬಾರದೆ?

ಗುಡಿಸುತಾಳೆ ಮುದ್ದು ಪುಟ್ಟು
ಕಸವನೆಲ್ಲ ಹಾರಿಸಿ!
ಲಂಗ ಮುದುರಿ ಪದ್ದು - ಅದೋ
ಗೋಮಯವನು ಸಾರಿಸಿ!

ರಂಗವಲ್ಲಿ ರಂಗು ರಂಗು
ಎಲಾ! ಜಾಣೆ ಶಾರದೆ!
ಬಳ್ಳಿ ಬಳ್ಳಿ ಬೆಳೆಯುತಿದೆ!
ಬಂದು ನೋಡಬಾರದೆ?

ಸಾಹಿತ್ಯ:  ಜಿ. ಪಿ. ರಾಜರತ್ನಂ


Tag: Rangavalli




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ