ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇನ್ನಿಲ್ಲವಾದ ಈ ಮುಗ್ಧತೆ, ಸುಂದರವಾದ ಮುಗುಳ್ನಗೆ

ಇನ್ನಿಲ್ಲವಾದ ಈ ಮುಗ್ಧತೆ, ಸುಂದರವಾದ ಮುಗುಳ್ನಗೆ

ನಿನ್ನೆಯ ದಿನ ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ಹದಿನೈದು ಜನ ಭಾರತೀಯರು ನಿಧನರಾದರು ಎಂಬ ಅಪಘಾತದ ಸುದ್ಧಿ ಮೂಡಿಬಂತು.  ಎಲ್ಲೋ ಹೀಗಾಯಿತಲ್ಲಾ ಎಂಬ ಸಂವೇದನೆ ಕಾಡಿ ಮರೆಯಾಯಿತು.  ಕೆಲವೊಮ್ಮೆ ಈ ಸಂಖ್ಯೆಗಳಲ್ಲಿ ಎಂತೆಂತಹ ಭವ್ಯತೆ ಅಡಗಿರುತ್ತದೆ ಎಂಬುದೇ ನಮ್ಮ ಆಳಕ್ಕೆ ಇಳಿಯುವುದಿಲ್ಲ.  ಈ ಹದಿನೈದು ಸಾವುಗಳಲ್ಲಿ 'ತರುಣಿ ಸಚ್ ದೇವ್' ಎಂಬ ಪ್ರತಿಭಾವಂತ ಎಳೆಯ ಜೀವ ಕೂಡಾ ಇತ್ತು ಎಂದಾಗ ಮನಸ್ಸು ಮುದುಡುತ್ತಿದೆ.

ಹಿಂದಿಯ ಪ್ರಖ್ಯಾತ ಚಿತ್ರ 'ಪಾ' ಒಳಗೊಂಡಂತೆ ಭಾರತದಾದ್ಯಂತ ಹಲವಾರು ಚಲನಚಿತ್ರಗಳು, 'ಪಾಂಚ್ವಿ ಪಾಸ್ ಹೈ' ಅಂತಹ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮಗಳು  ಮತ್ತು ಪ್ರಸಿದ್ಧ  ಜಾಹೀರಾತುಗಳಲ್ಲಿ ಮೂಡಿಬಂದಿದ್ದ ಈ ಸುಂದರ ಮುಗುಳ್ನಗೆ ಇಷ್ಟು ಬೇಗ ಆರಿಹೋಗಿದ್ದು ತುಂಬಲಾರದ ನಷ್ಟ.  ಈ ಬಾಲಕಿಯ ತಾಯಿ ಕೂಡಾ ಈ ಅಪಘಾತದಲ್ಲಿ ನಿಧನರಾಗಿದ್ದಾರೆ.  ಈ ಎಲ್ಲ ಜೀವಿಗಳ ಆತ್ಮಕ್ಕೆ ಶಾಂತಿ ಸಿಗಲಿ.  ಇಂತಹ ಅನಿರೀಕ್ಷಿತ ಆಘಾತ ಅಪಘಾತಗಳು ಇಲ್ಲವಾಗಲಿ.

ಒಂದು ಪ್ರಾರ್ಥನೆ:  ಈ ವಿಚಾರಕ್ಕೆ 'Like' option ಬಳಸಬೇಡಿ.  ಎಲ್ಲರೂ ಈ ದುರ್ಘಟನೆಯಲ್ಲಿ ಮರೆಯಾದ ಈ ಜೀವಗಳ ಶಾಂತಿಗಾಗಿ ಪ್ರಾರ್ಥಿಸೋಣ.

Tag: Taruni Sachdev

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ