ಮತ್ತೊಮ್ಮೆ ಮಾಸ್ಟರ್
ಮತ್ತೊಮ್ಮೆ ಮಾಸ್ಟರ್
-ಅಮಿತ ಎಂ. ಎಸ್.
ಸರಿಸುಮಾರು 20 ವರ್ಷಗಳೇ ಕಳೆದವು ಬೆಳ್ಳಿತೆರೆಯಿಂದ ಈ `ಮಾಸ್ಟರ್` ದೂರವುಳಿದು. ಈಗ ಪುನಃ ಬಣ್ಣದ ಲೋಕದತ್ತ ಹೆಜ್ಜೆಯನ್ನಿಡಲು ಹೊರಟಿದ್ದಾರೆ. ನಟನಾಗಿ ಅಲ್ಲ, ನಿರ್ದೇಶಕನಾಗಿ. ಶಂಕರ್‌ನಾಗ್ ಚಿತ್ರಗಳೆಂದರೆ ತಕ್ಷಣ ನೆನಪಾಗುವುದು ಅವರ ಅನೇಕ ಸಿನಿಮಾಗಳಲ್ಲಿರುತ್ತಿದ್ದ ಮುದ್ದುಮುಖದ ಹುಡುಗ ಮಾಸ್ಟರ್ ಮಂಜುನಾಥ್. `ಮಾಲ್ಗುಡಿ ಡೇಸ್` ಧಾರಾವಾಹಿ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಂಜುನಾಥ್ ಹೆಸರು ಪರಿಚಿತ.
ಶಂಕರ್‌ನಾಗ್ ಮರಣದ ಬಳಿಕ ಮಾಸ್ಟರ್ ಮಂಜುನಾಥ್ ಮತ್ತೆ ಬಣ್ಣಹಚ್ಚಲಿಲ್ಲ. ಕಾರಣ ಓದಿನತ್ತ ಗಮನ ಹರಿಸಿದ್ದು. `ರಾಮಾಚಾರಿ` ಅವರು ನಟಿಸಿದ ಕೊನೆಯ ಚಿತ್ರ. ಈಗ ಹೆಚ್ಚೂಕಡಿಮೆ ಎರಡು ದಶಕಗಳೇ ಉರುಳಿವೆ. ಮಂಜುನಾಥ್ ಮತ್ತೆ ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಆದರಿಲ್ಲಿ ಅವರ ಪಾತ್ರ ಬದಲಾಗಲಿದೆ. ನಟನೆಯ ಬದಲಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ವಿಶಿಷ್ಟ ಎಳೆಯನ್ನಿಟ್ಟುಕೊಂಡು ಸುಮಾರು ಒಂದು ವರ್ಷದಿಂದ ಕತೆ ಹೆಣೆಯುತ್ತಿರುವ ಮಂಜುನಾಥ್ ನಿರ್ದೇಶನಕ್ಕಿಳಿಯುವ ಕಾಲ ಸನ್ನಿಹಿತವಾಗಿದೆ. ಇನ್ನು ಆರು ತಿಂಗಳಲ್ಲಿ ಚಿತ್ರ ಪ್ರಾರಂಭಿಸುವುದು ಅವರ ಉದ್ದೇಶ. ಸದ್ಯ `ನೈಸ್` (ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್) ಸಾರ್ವಜನಿಕ ಸಂಪರ್ಕಾಧಿಕಾರ ವಿಭಾಗದ ಉಪಾಧ್ಯಕ್ಷರಾಗಿರುವ ಮಂಜುನಾಥ್, ಚಿತ್ರರಂಗದ ಪುನರ್‌ಪ್ರವೇಶಕ್ಕೆ ಬಿಡುವಿನ ವೇಳೆಗಾಗಿ ಕಾಯುತ್ತಿದ್ದಾರೆ. ಇದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯುಳ್ಳ ಚಿತ್ರ.
ಶಂಕರ್‌ನಾಗ್‌ರಂತಹ ಚಿಂತಕರ ಜೊತೆಯಲ್ಲಿ ಬೆಳೆದಿದ್ದರೂ ನನ್ನ ಮನಸ್ಸು ಕಮರ್ಷಿಯಲ್! ಆರ್ಟ್ ಮತ್ತು ಕಮರ್ಷಿಯಲ್ ಭೇದವೂ ಸರಿಯಲ್ಲ ಎನ್ನುತ್ತಾರೆ ಅವರು.
ಹಾಗಂತ ಮತ್ತೆ ಬಣ್ಣಹಚ್ಚುವುದೇ ಇಲ್ಲ ಎಂದು ಮಂಜುನಾಥ್ ನಿರ್ಧರಿಸಿಲ್ಲ. ಮತ್ತೆ ನಟಿಸಿದರೂ ನಟಿಸಬಹುದು. ಇಷ್ಟಪಡುವ ಪಾತ್ರ ಸಿಗಬೇಕಷ್ಟೆ. ಈ 20 ವರ್ಷದ ಅಂತರದಲ್ಲೂ ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ ಓದು, ಅದರ ಮುಂದಿನ ಜೀವನ ಮುಖ್ಯವಾಗಿದ್ದರಿಂದ ಒಪ್ಪಿಕೊಂಡಿರಲಿಲ್ಲ.
ಒಂದು ಸಲ ನಟನಾಗಿ ಗುರುತಿಸಿಕೊಂಡ ಬಳಿಕ ಬೇರೆ ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂ ಆತ ನಟನಾಗಿಯೇ ಉಳಿಯುತ್ತಾನೆ ಎನ್ನುವ ಮಂಜುನಾಥ್, ನಿರ್ದೇಶಕನಾಗಬೇಕೆಂಬ ತಮ್ಮ ಗುರು ಶಂಕರ್‌ನಾಗ್ ಸಲಹೆಯನ್ನು ಪಾಲಿಸುವ ಉತ್ಸಾಹದಲ್ಲಿದ್ದಾರೆ. `ನಿನ್ನಲ್ಲಿ ಸೃಜನಶೀಲತೆ ಇದೆ.
ಅದನ್ನು ನಿರ್ದೇಶನಕ್ಕೆ ಬಳಸಿಕೋ` ಎಂಬ ಸಲಹೆ ನೀಡಿದ್ದರು ಶಂಕರ್‌ನಾಗ್. ಬಹುಶಃ ಅವರು ಬದುಕಿದ್ದರೆ ಸಿನಿಮಾ ನಂಟು ಬಿಡುತ್ತಿರಲಿಲ್ಲ. ಆಗಲೇ ನಿರ್ದೇಶನಕ್ಕೂ ಇಳಿದಿರುತ್ತಿದ್ದೆನೇನೋ ಎನ್ನುತ್ತಾರೆ.
ಎಲ್ಲಾ ಬಗೆಯ ಉದ್ಯಮ ವ್ಯವಹಾರಗಳಲ್ಲೂ ಕಷ್ಟಗಳು ಎದುರಾಗುತ್ತವೆ. ಅಂಗಡಿಗಳು ಹೆಚ್ಚಿದಷ್ಟೂ ಉತ್ಪನ್ನ ಹೆಚ್ಚು ಮಾರಾಟವಾಗುತ್ತದೆ. ಹಾಗೆಯೇ ಹೆಚ್ಚು ಚಿತ್ರಮಂದಿರ ಗಳಿದ್ದಷ್ಟೂ ಚಿತ್ರರಂಗದ ಸಮಸ್ಯೆ ಬಗೆಹರಿಯುತ್ತದೆ.
ಚಿತ್ರಮಂದಿರಗಳೇ ಕಡಿಮೆಯಾಗುತ್ತಿರುವಾಗ ಸಿನಿಮಾಗಳಿಗೆ ಅವು ಸಿಕ್ಕುವುದಾದರೂ ಹೇಗೆ? ಸರ್ಕಾರ ಚಿತ್ರಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು. ಶಂಕರ್‌ನಾಗ್ ಈ ಮಾತನ್ನು ಆಗಲೂ ಹೇಳುತ್ತಿದ್ದರು. ಹಾಗೆಯೇ ಚಿತ್ರೋದ್ಯಮದಲ್ಲಿ ಹಲವಾರು ವಿಭಾಗಗಳಿವೆ. ಎಲ್ಲರೂ ಒಂದಾಗಿ ಚರ್ಚಿಸಿದರೆ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದರೆ ನಮ್ಮಲ್ಲಿ ಅದು ಆಗುತ್ತಿಲ್ಲ ಎನ್ನುತ್ತಾರೆ ಮಂಜುನಾಥ್.
ಡಬ್ಬಿಂಗ್ ವಿವಾದವನ್ನು ಮಂಜುನಾಥ್ ಆರ್ಥಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾರೆ. ಪೂರೈಕೆ ಕಡಿಮೆಯಿದ್ದಾಗ ಬೇಡಿಕೆ ಹೆಚ್ಚುತ್ತದೆ. ಕನ್ನಡದಲ್ಲಿ ಪ್ರಾದೇಶಿಕ ಭಾಷಾ ವಾಹಿನಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳು ಬೇಕು. ಜನ ಡಬ್ಬಿಂಗ್ ಬಯಸುತ್ತಾರೆ ಎಂದರೆ ನಮ್ಮಲ್ಲಿ ಹೊಸ ಬಗೆಯ ಕಾರ್ಯಕ್ರಮಗಳ ಕೊರತೆಯಿದೆ ಎಂದರ್ಥ. ನಮ್ಮಲ್ಲಿ ಅಂಥ ಕೊರತೆ ವಾಸ್ತವದಲ್ಲಿ ಎದುರಾಗಿಲ್ಲ.
ಪ್ರಜಾಪ್ರಭುತ್ವದ ಹಾದಿಯಲ್ಲಿ ಯಾರಿಗೆ ಹೆಚ್ಚು ಮತ ಬೀಳುತ್ತದೋ ಅವರು ಗೆಲ್ಲುತ್ತಾರೆ. ಹಾಗೆಯೇ ಡಬ್ಬಿಂಗ್ ಪರವಾಗಿರುವವರು ಜಯಿಸಬಹುದು. ಆದರಿದು ಕೇವಲ ಸೋಲು ಗೆಲುವಿನ ಪ್ರಶ್ನೆಯಲ್ಲ. ಇದರ ಹಿಂದಿನ ನೂರಾರು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು.
`ಮಾಲ್ಗುಡಿ ಡೇಸ್` ಧಾರಾವಾಹಿ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬೇಕು ಎಂದಾಗ ಅದನ್ನು ಡಬ್ಬಿಂಗ್ ಮಾಡಬಹುದಾಗಿತ್ತು. ಆದರೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಚಿತ್ರೀಕರಿಸಲಾಯಿತು. ತುಟಿ ಚಲನೆಗೆ ಕೃತಕ ದನಿ ಸೇರಿಸುವುದನ್ನು ಶಂಕರ್‌ನಾಗ್ ಒಪ್ಪುತ್ತಿರಲಿಲ್ಲ.
ನನ್ನ ಪ್ರಕಾರ ಕಲಾವಿದನ ನಿಜವಾದ ಶ್ರಮ ತಿಳಿಯುವುದು ಆತ ಸಂಭಾಷಣೆ ಒಪ್ಪಿಸುವ ಸ್ವರದಲ್ಲಿ. ಮುಖ ಭಾವನೆಯಿಂದ ಮಾತ್ರ ಉತ್ತಮ ನಟ ಎಂದು ಗುರುತಿಸಲು ಸಾಧ್ಯವಿಲ್ಲ. ಭಾವನೆ ವ್ಯಕ್ತಪಡಿಸುವಷ್ಟೇ ಶ್ರಮ ಅದಕ್ಕೆ ನೀಡುವ ಸ್ವರದಲ್ಲೂ ವ್ಯಕ್ತವಾಗಬೇಕು. ಹೀಗಾಗಿ ಡಬ್ಬಿಂಗ್ ಕಲಾವಿದನ ಪ್ರತಿಭೆಯನ್ನು ಕೊಲ್ಲುತ್ತದೆ ಎನ್ನುವ ಮಂಜುನಾಥ್ ತಮ್ಮ ನಿರ್ದೇಶನದ ಚಿತ್ರದಲ್ಲಿ ಹೊಸ ಪ್ರಯೋಗಗಳನ್ನು ಅಳವಡಿಸುವ ಉತ್ಸಾಹದಲ್ಲಿದ್ದಾರೆ.
ಕ್ರಪೆ: ಪ್ರಜಾವಾಣಿ
Tag: Master Manjunath

ಕಾಮೆಂಟ್‌ಗಳು