ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾನಲ್ಲಿ ನಿನ್ನಿಂದ ಸೂರ್ಯೋದಯ


ಬಾನಲ್ಲಿ ನಿನ್ನಿಂದ ಸೂರ್ಯೋದಯ 
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು ನೀರು ಭುವಿ ಸೇರಲು
ಭೂಮಿ ಹಸಿರಾಗಲು ಲೋಕ ಗೆಲುವಾಗಲು
ಓಂ ಓಂ ಓಂ ಓಂ ಓಂ ಓಂ ಓಂ
ನೀ ಕಾರಣನು ದೇವ
ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈ ಲತೆ ನೀನೆ ಈ ಸುಮ ನೀನೆ
ಈ ಸುಮತಂದ ಗಂಧವೂ ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ
ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ ಕೊರಳಲ್ಲಿ ಇಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ಹಣ್ಣ ರುಚಿಯಲ್ಲಿಯೂ, ಜೇನ ಸಿಹಿಯಲ್ಲಿಯೂ
ಹಾಲ ಬೆಳಕಲ್ಲಿಯೂ, ರಾತ್ರಿ ಇರುಳಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ 
ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈಶ್ವರ ನೀನೇ..
ಈಶ್ವರ ನೀನೇ ಶಾಶ್ವತ ನೀನೇ
ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂತ ನಗೆಯಲ್ಲಿಯೂ
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ ಸಂಗೀತ ಸ್ವರದಲ್ಲಿಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ
ಕಡಲ , ಸಿಡಿವ ಸಿಡಿಲಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ 

ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಸಾಹಿತ್ಯ: ಹಂಸಲೇಖ


photo courtesy: Roopali Katta (http://www.flickr.com/photos/cybagesoftware/5900474740/)

Tag: Banalli ninninda suryodaya, Baanalli ninninda suryodaya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ