ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾ ಹಾಡಲೂ ನೀವು ಆಡಬೇಕು

ನಾ ಹಾಡಲೂ ನೀವು ಆಡಬೇಕು
ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು

ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ

ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ...ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ

ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್


Tag: Naa haadalu neevu haadabeku


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ