ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶರಣೆಂಬೆ ಶ್ರೀಲಲಿತೆ

ಶ್ರೀಮಾತೆ ಪಂಪಾಂಬೆ, ಶ್ರೀಲಲಿತೆ ಜಗದಾಂಬೆ,
ಬೆಳಗಾಯಿತು ಏಳಮ್ಮಾ, ಶರಣು ಶರಣೆಂಬೆ

ಶರಣೆಂಬೆ ಶ್ರೀಲಲಿತೆ
ಮಾತೆ ಶರಣೆಂಬೆ ಶ್ರೀಲಲಿತೆ
ಈರೇಳು ಧರೆಯಾಳೋ
ಮಾತೇ ವಿಧಾತೆ
ಶರಣೆಂಬೆ ಶ್ರೀಲಲಿತೆ

ಸತಿಶಕ್ತಿಧಾತೆ ತುಳಸೀಮಾತೇ
ಆರೋಗ್ಯಧಾತೆ ಶ್ರೀಗೊಮಾತೆ
ಶರಣೆಂಬೆ ಶ್ರೀಲಲಿತೆ

ಕನ್ನಡ ಒಡೆಯರ ಕುಲದೇವತೆ
ಅನ್ಯರ ನಾ ಬೇಡಿ ಸಾಕಾಯಿತೇ
ಅಣ್ಣಪ್ಪ ಗುರುವಿನ ಮನದೇವತೆ
ನೀಯೇ ಕಾಯೇ ಶ್ರೀಮಾತೆ
ಶರಣೆಂಬೆ ಶ್ರೀಲಲಿತೆ
ಈರೇಳು ಧರೆಯಾಳೋ
ಮಾತೇ ವಿಧಾತೆ
ಶರಣೆಂಬೆ ಶ್ರೀಲಲಿತೆ

ಚಿತ್ರ: ಸತೀಶಕ್ತಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಲೀಲಾ

Tag: sharanembe sri lalithe, sharanember sree lalite



ಕಾಮೆಂಟ್‌ಗಳು

  1. ತುಂಬಾ ಚೆನ್ನಾಗಿದೆ. ಈ ಹಾಡು ಯೂ ಟ್ಯೂಬ್ ನಲ್ಲಿ ಇಲ್ಲವೇ ಇಲ್ಲ. ಆಡಿಯೋ ಕೂಡ ಇಲ್ಲ. ಯಾರಾದರೂ ಅಪ್ಲೋಡ್ ಮಾಡಿದರೆ ಚೆನ್ನಾಗಿರುತ್ತದೆ.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ