ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಬನ್ನಿ ಭಾವಗಳೆ ಬನ್ನಿ
ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ
ಬನ್ನಿ ಸಂಜೆ ಹೊಂಬಿಸಿಲಿನ
ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ
ಮೇಘದ
ಪ್ರೀತಿಯ ಧಾರೆಯಲಿ
ಲೋಕಕೆ ಹೊದಿಸಿದ ಕರಿತೆರೆ
ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ
ನೇಯುವ
ಹುಣ್ಣಿಮೆ ಹಸ್ತದಲಿ
ಬನ್ನಿ ಬನ್ನಿ ನನ್ನೆದೆಯ
ಬಯಲಿದು
ಭಿತ್ತದ ಕನ್ನೆ ನೆಲ
ಬೆಳೆಯಿರಿ ಇಲ್ಲಿ, ಬಗೆಬಗೆ
ತೆನೆಯ
ನಮಿಸುವೆ ನೂರು ಸಲ
ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣ
ಕ್ಷಣವೂ
ಎದೆಯನು ಹದಗೊಳಿಸಿ
ಸಾಹಿತ್ಯ: ಎನ್.ಎಸ್.
ಲಕ್ಷ್ಮೀ ನಾರಾಯಣ ಭಟ್ಟ
ಸಂಗೀತ:
ಸಿ. ಅಶ್ವಥ್
ಗಾಯನ: ಶಿವಮೊಗ್ಗ
ಸುಬ್ಬಣ್ಣ
Tag: Banni Bhavagale banni nannedege
ಕಾಮೆಂಟ್‌ಗಳು