ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ನಂಬದ ಬೆಳಕಿನ ಸೆರಗಿನಲಿ
ತುಂಬಿ ತುಂಬಿ ಮಹಾನಾಡಿನ ಪಾಡಿನ
ತುಂಬದಾಸೆಗಳ ಕೊರಗಿನಲಿ
ಅಕ್ಕವೂ ಕೋಗಿಲೆ ಚಿಕ್ಕವೂ ಕೋಗಿಲೆ
ಅಕ್ಕಾವೊ ಚಿಕ್ಕಾವೊ ಕೋಗಿಲೇ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ಮರದ ಮೇಲೆ ಕೂಗಾಡುವ ಹಾಡಿಗೆ
ಹೆಸರು ಬಂದಿತೇ ಕೋಗಿಲೆ
ಸೊಕ್ಕಿ ಬರುವ ದುಮ್ಮಾನದ ಕೂಗಿಗೆ
ಸುಖದ ಊರೆ ಹೆಬ್ಬಾಗಿಲೆ
ತೆರೆದುದೇ ಈಗಲೇ
ಕಾಣದೇ ಕೋಗಿಲೇ
ತೆರೆದುದೇ ಈಗಲೇ
ಕಾಣದೇ ಕೋಗಿಲೇ
ಅಕ್ಕವೂ ಕೋಗಿಲೆ ಚಿಕ್ಕವೂ ಕೋಗಿಲೆ
ಅಕ್ಕಾವೊ ಚಿಕ್ಕಾವೊ ಕೋಗಿಲೇ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ಅಲ್ಲೇ ಇರು ನೀ ಇಲ್ಲೇ ಇರು ನೀ
ಎಲ್ಲೇ ಇರು ನೀ ಬರಿಯದನಿ
ಎಲ್ಲು ನಾದದಾ ತುಷಾರವಾಹಿನಿ
ಎತ್ತರದುತ್ತರ ನಿನ್ನ ದನಿ
ಬಾನವು ಕೋಗಿಲೇ ಹೆ ಹೇ ಹೇ
ಮುಗಿಲ ಮುತ್ತಾಗಲೇ ಹೆ ಹೇ ಹೇ
ಬಾನವು ಕೋಗಿಲೇ
ಮುಗಿಲ ಮುತ್ತಾಗಲೇ
ಅಕ್ಕಾವೊ ಚಿಕ್ಕಾವೊ ಕೋಗಿಲೇ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ಹೂವು ಅಲ್ಲದಾ ಎಲೆಯು ಅಲ್ಲದಾ
ಬನದ ಹುಟ್ಟು ಈ ಕೋಗಿಲೇ
ಎದೆಯ ಗಾಯದಲಿ ಮೆಲ್ಲನೆ ಸುಳಿಯುವ
ದನಿಯ ನೇಗಿಲೇ ಕೋಗಿಲೆ
ಹಾಡಿತೇ ಕೋಗಿಲೇ
ಇಲ್ಲವೇ ಹಸುರೆಲೇ
ಅಕ್ಕವೂ ಕೋಗಿಲೆ ಚಿಕ್ಕವೂ ಕೋಗಿಲೆ
ಅಕ್ಕಾವೊ ಚಿಕ್ಕಾವೊ ಕೋಗಿಲೇ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ನಂಬದ ಬೆಳಕಿನ ಸೆರಗಿನಲಿ
ತುಂಬಿ ತುಂಬಿ ಮಹಾನಾಡಿನ ಪಾಡಿನ
ತುಂಬದಾಸೆಗಳ ಕೊರಗಿನಲಿ
ಅಕ್ಕವೂ ಕೋಗಿಲೆ ಚಿಕ್ಕವೂ ಕೋಗಿಲೆ
ಅಕ್ಕಾವೊ ಚಿಕ್ಕಾವೊ ಕೋಗಿಲೇ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ತುಂಬು ತಿಂಗಳಿನ ಮಲ್ಲಿಗೆ ಹಂಬಿನ
ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ
Photo courtesy: Radhika’s blog (http://rr2606.wordpress.com/page/2/)
Tag: Tumbu tingalina, Thumbu Thingalina
Tag: Tumbu tingalina, Thumbu Thingalina
ನಿಸರ್ಗ ಕವಿತೆ ತುಂಬಾ ಚೆನ್ನಾಗಿ ಹಾಡಿದ್ದಾರೆ. ಹಾಡಿದ ಗಾಯಕಿಗೆ ಅಭಿನಂದನೆಗಳು
ಪ್ರತ್ಯುತ್ತರಅಳಿಸಿ