ಯಾಕೆ ಮೂಕನಾದೋ ಗುರುವೆ ನೀ
ಯಾಕೆ ಮೂಕನಾದೋ ಗುರುವೆ ನೀ
ಯಾಕೆ ಮೂಕನಾದೆ ಲೋಕಪಾಲಕನೇ
ಸಾಕುವರ್ಯಾರಯ್ಯಾ ಶ್ರೀಕರ ರಾಘವೇಂದ್ರ
ಹಿಂದಕ್ಕೆ ನೀ ಎನ್ನ ಮುಂದೆ ಸುಳಿದೂ ಈಗ
ಮಂದಿಯಂದದೆ ಎನ್ನ ಮಂದನ್ನ ಮಾಡಿ
ಬೇಕಾಗದಿದ್ದರೆನ್ನ ಯಾಕೆ ಕೈಯ ಪಿಡಿದೀ
ಕಾಕುಜನರೊಳೆನ್ನ ನೂಕಿ ಬಿಟ್ಟೀಗ
ನಿನ್ನಂಥ ಕರುಣಿ ಇಲ್ಲ ನನ್ನಂಥ ಜಿಪುಣರಿಲ್ಲ
ಘನ್ನ ಮಹಿಮ ನೀ ಎನ್ನನು ಬಿಟ್ಟೀಗ
ಎಂದಿಗಾದರು ನಿನ್ನ ಹೊಂದಿಕೊಂಡೆನು ನಾನು
ಇಂದು ನೀ ಬಿಟ್ಟರೆನ್ನ ಮುಂದೆ ಕಾಯ್ವರಾರೋ
ಜನ್ಯನು ನಾನಯ್ಯ ಜನಕನು ನೀನಯ್ಯ
ಮನ್ನಿಸು ನೀ ನಿತ್ಯ ನನ್ನ ಶರಣನಲ್ಲೇ
ಈಗ ಪಾಲಿಸಿದರೆ ಯೋಗಿ ಕುಲವರ್ಯಾ
ರಾಘವೇಂದ್ರನೆ ಭವ ಸಾಗುವರ್ಯಾರಯ್ಯ
ನಾಥನು ನೀ.. ಅನಾಥನು ನಾನಯ್ಯ...
ಪಾಥೋಜಾ ಗುರು ಜಗನ್ನಾಥ ವಿಠ್ಠಲ ಪ್ರಿಯ
ಸಾಹಿತ್ಯ: ಜಗನ್ನಾಥ ದಾಸರು
Tag: Yake mookanado guruve nee, Yake Mukanado Guruve nee
Tag: Yake mookanado guruve nee, Yake Mukanado Guruve nee
ಕಾಮೆಂಟ್‌ಗಳು