ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಳಕು ಬಂದಿದೆ ಮನೆಯ


ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ
ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ

ಬೀದಿ ಬಯಲನು ಗುಡಿಸಿ
ಛಳಿಯ ತೋರಣ ಕಟ್ಟಿ
ಕಾದಿಹುದು ಸುಳಿಗಾಳಿ
ಕಳ್ಳ ದನಿಯಲಿ ಹಾಡಿ

ನಿನ್ನೆ ರಾತ್ರಿಯ ಹೊತ್ತ 
ಮುಳ್ಳು ಹೊಂಗೆಯ ಮುಸುಕು
ಇನ್ನು ಮಲಗುವುದೆ ಅದು
ಕಣ್ಣು ತೆರೆದು ನೋಡಿ

ಅಲ್ಲಿ ಮಾಮಾರ ನೋಡು ಎಂತೊಂದು ತಳಿರಿಹುದು
ಆ ಹಸಿರು ಎಷ್ಟು ಮೋಹಕ ಏನದರ ಬೆಡಗು
ನಾಳಿನಾಶೆಯ ಭರವು ಹೂವಾಗಿ ಪರಿಮಳಿಸೆ
ಮುಕ್ತವಾಗಿಹ ಜಗವು ತಲೆಬಾಗಿ ನಿಂದಿಹುದು

ಎಲ್ಲಿಂದ ಬಂದಿಹುದು? ಏನೆಂದು ಮೊರೆಯುತಿದೆ? 
ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ?
ಎಂಬ ಪ್ರಶ್ನೆಯ ಕೆದಕಿ ಮುಸುಕೆಳೆಯದಿರು ಮತ್ತೆ 
ಇದೊ ಬಂದೆ ಎನ್ನುತ್ತಾ ಎದ್ದೇಳು ಸ್ವಾಗತಕೆ

ಸಾಹಿತ್ಯ: ರಾಘವೇಂದ್ರ ಇಟಗಿ

Photo Courtesy: visualphotos.com

Tag: Belaku bandide maneya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ