ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂಕು ಡೊಂಕು ದಾರಿ ಬ್ಯಾಡ

ಅಂಕು ಡೊಂಕು ದಾರಿ ಬ್ಯಾಡ
ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದೆ ಶಂಕೆ ಬ್ಯಾಡ
ಸಂತೆಯಲ್ಲಿ ಚಿಂತೆ ಬ್ಯಾಡ
ಅಂತೆ ಕಂತೆ ಮಾತೆ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ
ದುಃಖಕೆ ಹೇಳು ಊಫಿ
ಎವ್ರಿಡೇ ಬಿ ಹ್ಯಾಪಿ

ಆಟಕ್ಕುಂಟು ಲೆಕ್ಕಕ್ಕಿಲ್ಲ
ಅನ್ನೋ ಬಾಳು ಬಾಳೇ ಅಲ್ಲ
ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬ್ಯಾಡ
ಸ್ನೇಹದಲ್ಲಿ ವಿರಸ ಬ್ಯಾಡ
ಜಾಣ್ನುಡಿ ಚಂದನ
ಇರುಳು ಕಂಡ ಬಾವಿಗೆ
ಹಗಲು ಬೀಳಬಾರದು
ಗಾದೇ ಮಾತೆ ಸೊಗಸು
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೆ
ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ
ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಗೇಕೆ ಕಾಡಿಗೆ ಕೂಡಿಗೇಕೆ ಬಾಡಿಗೆ
ಗಾದೇ ಮಾತೆ ಸೊಗಸು

ಅಂಕು ಡೊಂಕು ದಾರಿ ಬ್ಯಾಡ
ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದೆ ಶಂಕೆ ಬ್ಯಾಡ
ಸಂತೆಯಲ್ಲಿ ಚಿಂತೆ ಬ್ಯಾಡ
ಅಂತೆ ಕಂತೆ ಮಾತೆ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ
ದುಃಖಕೆ ಹೇಳು ಊಫಿ
ಎವ್ರಿಡೇ ಬಿ ಹ್ಯಾಪಿ

 ಚಿತ್ರ: ಆಪ್ತ ಮಿತ್ರ
ಸಾಹಿತ್ಯ: ವಿ ಮನೋಹರ್
ಸಂಗೀತ: ಗುರುಕಿರಣ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ, ಚಿತ್ರಾ
Tag: Anku donku dari byada, Anku donku daari byaada

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ