ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏನೋ ಸಂತೋಷ, ಏನೋ ಉಲ್ಲಾಸ

ಏನೋ ಸಂತೋಷ, ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದು ಮುಗಿಯದಾ ಈ ಪ್ರೇಮ ಬಂಧನ
ಜನ್ಮ ಜನ್ಮದಾ ಈ ಆತ್ಮ ಬಂಧನ

ನನ್ನಾಸೆ, ನಿನ್ನಾಸೆ
ಒಂದಾಗಿ ಸೇರಿ ಏನೇನೊ ಕೋರಿ
ಉಯ್ಯಾಲೆ ತಾನಾಡಿದೆ
ನಿನ್ನಲ್ಲಿ, ನನ್ನಲ್ಲಿ
ಒಲವೆಲ್ಲ ಕೂಡಿ ಗೆಲುವಿಂದ ಹಾಡಿ
ಎಲ್ಲೆಲ್ಲು ಓಲಾಡಿದೆ
ದಾಹವೊ, ಮೋಹವೊ
ಹೂಬಳ್ಳಿಯೊಂದು ಮರಸುತ್ತಿಬಂದು
ತಾನೀಡೆ ಆಲಿಂಗನ
ಸಂಚಿನ ಮಿಂಚಿನ
ಕಣ್ಣೆರಡು ಕೂಡಿ ಮಾಡಿರಲು ಮೋಡಿ
ಮೈಯಲ್ಲಿ ಮೃದು ಕಂಪನ
ಇಂದೇಕೋ ನಮ್ಮಲ್ಲಿ
ಇಂಥಹ ತಲ್ಲಣ

ನೀನಲ್ಲಿ ನಾನಿಲ್ಲಿ
ಈ ನೋಟದಲ್ಲಿ ಆ ನೋಟ ನೆಟ್ಟು
ಚೆಲ್ಲಾಟ ನೀನಾಡಿದೆ
ಹಾಡುತ, ಆಡುತಾ
ಮನವೆಂಬ ಹಕ್ಕಿ ಒಲವಲ್ಲೆ  ಉಕ್ಕಿ
ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನಂದ
ಹೂವಲ್ಲಿ ಜೇನು ನನ್ನಲ್ಲಿ ನೀನು
ಬಾಳೆಲ್ಲ ಹಾಯಾಗಿದೆ
ನಾವೆಂದು ಒಂದೆಂದು
ನಮ್ಮಂತರಂಗ ಆನಂದರಂಗ
ಅನುರಾಗ ತಾ ತಂದಿದೆ
ತಂಗಾಳಿ ತಂಪಾದ
ಸಂದೇಶ ಸಾರಿದೇ.

ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ.


Tag: Eno santosha eno ullasa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ