ಚಿಕ್ಕ ಗುಲಾಬಿ ಹೂವೇ
ಚಿಕ್ಕ ಗುಲಾಬಿ ಹೂವೇ
“ಚಿಕ್ಕ ಗುಲಾಬಿ ಹೂವೇ
ಬಿಸಿಲಲಿ ಕುಳಿತೆ
ಎದ್ದೇಳು ಗುಲಾಬಿ
ಹಿಂದೆ ಮುಂದೆ ತಿರುಗು
ನಿಂಗೆ ಯಾರು ಬೇಕೋ
ಆರಿಸಿಕೋ”
ಇದು ನಾವು ಪುಟ್ಟವರಿದ್ದಾಗ ಹಾಡಿ ಆಡುತ್ತದ್ದ ಆಟ.
ಅದನ್ನು ಉತ್ತರ ಕರ್ನಾಟಕದಲ್ಲಿ ಹೀಗೆ ಆಡುತ್ತಾರಂತೆ. ಆಟಗಾರರು ವರ್ತುಳಾಕಾರವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನಡುವೆ ಕುಳಿತವಳು “ಕಮಲೆ”
ಸುತ್ತಕುಳಿತವರೆಲ್ಲ -
“ಚಿಕ್ಕ ಗುಲಾಬಿ ಹೂವೇ
ಬಿಸಿಲಲಿ ಕುಳಿತೇ
ಎದ್ದು ನಿಲ್ಲೇ ಕಮಲೇ
ಸುತ್ತುಮುತ್ತು ತಿರುಗೇ
ಯಾರ್ ಬೇಕಾರ್ ಮುಟ್ಟೇ”
ಎದ್ದು ನಿಲ್ಲೇ ಕಮಲೇ ಎಂದೊಡನೆ ಕಮಲೆ ಎದ್ದು ಸುತ್ತ ತಿರುಗುತ್ತ ಮುಟ್ಟೇ ಎಂದೊಡನೆ ಕೈ ಸಮೀಪದ ಒಬ್ಬರನ್ನು ಮುಟ್ಟುವಳು. ಅವಳು ಮುಂದಿನ ಆಟಕ್ಕೆ ಕಮಲೆ, ಹಿಂದಿನ ಕಮಲೆ ತೆರವಾದ ಸ್ಥಳದಲ್ಲಿ ಕುಳಿತುಕೊಳ್ಳುವಳು. ಹೀಗೆಯೇ ಈ ಆಟ ಸಾಕಾಗುವವರೆಗೆ ನಡೆಯುವದು.
ಛಾಯಾಚಿತ್ರಕಾರರು: ಕೋಕಿಲಾ ಗಣೇಶ್
Tag: Chikka Gulabhi hoove, Chikka Gulabi Huve
Tag: Chikka Gulabhi hoove, Chikka Gulabi Huve
ಕಾಮೆಂಟ್‌ಗಳು