ಸಕಲಕೆಲ್ಲಕೆ ನೀನೇ
ಸಕಲಕೆಲ್ಲಕೆ ನೀನೇ ಅಕಳಂಕ ಗುರುವೆಂದು
ನಿಖಿಲ ಶಾಸ್ತ್ರವು ಪೇಳುತಿರಲರಿದೆನು.
ಅವರವರ ದರುಶನಕೆ ಅವರವರ ದೇಶದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ
ಅವರವರ ಭಾವಕ್ಕೆ ಅವರವರ ಅರ್ಚನೆಗೆ
ಅವರವರಿಗೆ ದೇವ ನೀನೊಬ್ಬನೇ.
ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲೆ ದೇವನೇ
ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಲಿಂಗವೆ.
ಸಾಹಿತ್ಯ: ಮುಪ್ಪಿನ ಷಡಕ್ಷರಿ
Tag: Sakalakellake neene
ಎರೆಗಂಬಳಿಯ ಸಿದ್ಧ ವರಲಿಂಗನಾಮದಿಂ
ಪ್ರತ್ಯುತ್ತರಅಳಿಸಿಹರನೆ ನೀನೆನಗೆ ದೀಕ್ಷೆಯಮಾಡಿದೆ
ವರಷಡಕ್ಷರಿ ಎಂಬ ದೇವರ ನಾಮದಿಂದೆನಗೆ ಅರುಹಿದಿರಿ ಶಿವಜ್ಞಾನದನುಭವವನು. ಈ ಸಾಲುಗಳು ಮೊದಲಿಗೆ ಬರೆಯಲಿಲ್ಲವೇಕೆ ಸರ್?????????