ದೇವ ಬಂದ
ದೇವ
ಬಂದ ನಮ್ಮ ಸ್ವಾಮಿ ಬಂದನೊ
ದೇವರ
ದೇವ ಶಿಖಾಮಣಿ ಬಂದನೊ
ಉರಗಶಯನ
ಬಂದ ಗರುಡಗಮನ ಬಂದ
ನರರಿಗೊಲಿದವ
ಬಂದ ನಾರಾಯಣ ಬಂದ
ಮಂದರೋದ್ದರ
ಬಂದ ಮಾಮನೋಹರ ಬಂದ
ಬೃಂದಾವನಪತಿ
ಗೋವಿಂದ ಬಂದನೊ
ನಕ್ರಹರನು
ಬಂದ ಚಕ್ರಧರನು ಬಂದ
ಅಕ್ರೂರಗೊಲಿದ
ತ್ರಿವಿಕ್ರಮ ಬಂದನೊ
ಪಕ್ಷಿವಾಹನ
ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ
ಫಲದ ಶ್ರೀಲಕ್ಷ್ಮೀರಮಣ ಬಂದನೊ
ನಿಗಮಗೋಚರ
ಬಂದ ನಿತ್ಯತೃಪ್ತನು ಬಂದ
ನಗೆಮುಖ
ಪುರಂದರವಿಠ್ಠಲ ಬಂದನೊ
ಸಾಹಿತ್ಯ: ಪುರಂದರದಾಸರು
Tag: Deva banda namma
ಕಾಮೆಂಟ್‌ಗಳು