ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಈ ಪರಿಯ ಸುಲಭ ಇನ್ಯಾವ ದೇವರು ಉಂಟು


ಈ ಪರಿಯ ಸುಲಭ ಇನ್ಯಾವ ದೇವರು ಉಂಟು
ಗೋಪಾಲಕೃಷ್ಣ ಪಂಢರೀನಾಥನಲ್ಲದೆ 

ಕಾಸು ಇಲ್ಲದೇ ಪೋಗಿ ಶ್ರೀಶನಂಘ್ರಿಯ ಮೇಲೆ
ಲೇಸಾಗಿ ಹಣೆಯಿಟ್ಟು ನಮಿಸಬಹುದೋ
ಕೂಸೆಂದು ಗದ್ದ ಹಿಡಿದು ಮುದ್ದಿಡಬಹುದು
ಕೂಸಾಗಿ ಕೈ ಹಿಡಿದು ಕಾಡಿಬೇಡಲುಬಹುದೊ
ವಾಸುದೇವನ ಮೂರ್ತಿ ಅಪ್ಪಿಕೊಳ್ಳಲುಬಹುದು || ೧ ||

ಜಾತಿಕುಲ ಗೋತ್ರಗಳ ಆತ ನೋಡುವದಿಲ್ಲ
ಪ್ರೀತಿಯಿಂದಲಿ ಬರುವ ಭಕುತ ಜನಕೆಲ್ಲಾ
ರಾತ್ರಿ ಹಗಲೆನ್ನದೇ ಸತತ ಜನಜಾತ್ರಿಗೆ
ಮಿತ್ರನಂದದಿ ಭೆಟ್ಟಿಕೊಡುವ ವಿಠ್ಠಲರಾಯ || ೨ ||

ದುಡ್ಡಿವನ ತಿಮ್ಮಪ್ಪ ದೊಡ್ಡಗುಡ್ಡದಿ ನಿಂತ
ಕಡಲದಡದಲಿ ನಿಂತ ಮಡಿವಂತ ಕೃಷ್ಣಾ
ಬಡವರೊಡೆಯನು ನಾನು ಬೇಗ ಬನ್ನಿರಿ ಎಂದು
ನಡದಮೇಲೆ ಕೈಯಿಟ್ಟು ನಿಂತ ಭೂಪತಿ ವಿಠ್ಠಲ || ೩ ||

ಸಾಹಿತ್ಯ: ಭೂಪತಿ ವಿಠ್ಠಲದಾಸರು

Tag: Pandarinatha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ