ಅರವಿಂದಾಲಯೇ ತಾಯೇ
ಅರವಿಂದಾಲಯೇ
ತಾಯೇ ಶರಣು ಹೊಕ್ಕೆನು ಕಾಯೇ
ಸಿರಿ
ರಮಣನ ಪ್ರಿಯೇ ಜಗನ್ಮಾತೆ
ಕಮಲ
ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ
ಕಮನೀಯ
ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು
ನಿನ್ನ
ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ
ಅಜಭಾಮಾದಿಗಳ
ಪ್ರಸನ್ನೇ ಕಾಯೇ ಎನ್ನನು
ಹರಿ
ನಿನ್ನ ಉರದಲ್ಲಿ ಧರಿಸಿದನೆಂಬಂತ ಗರುವದಿ ಮರೆಯದಿರೆ
ನಿರತ
ನಿನ್ನಯ ಮುದ್ದು ಪುರಂದರವಿಠ್ಠಲನ ಚರಣಕಮಲವ ತೋರಿಸೆ
ಸಾಹಿತ್ಯ: ಪುರಂದರದಾಸರು
Tag: Aravindalaye thaye, Aravindalaye taaye
ಕಾಮೆಂಟ್‌ಗಳು