ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇದೇ ರಾಗದಲ್ಲಿ ಇದೇ ತಾಳದಲ್ಲಿ

ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೇ ರಾಗದಲ್ಲಿ

ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈಮರೆತ ಶ್ಯಾಮ
ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೇ ರಾಗದಲ್ಲಿ 

ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ:
ಕಾಲ ಮರೆತುಹೋದವು ಭುವಿಗ ಜಾರಿ ಬಂದವು
ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೇ ರಾಗದಲ್ಲಿ

ಚಿತ್ರ: ಶ್ರಾವಣ ಬಂತು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ರಾಜ್ ಕುಮಾರ್ ಮತ್ತು ವಾಣಿ ಜಯರಾಂ
Tag: Ide raagadalli ide taladalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ