ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ

ಮುಂಜಾನೆಯಾ ಎಳೆಬಿಸಿಲಲ್ಲಿ
ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲಿ
ಪ್ರಕೃತಿಯ ಶಕ್ತಿಯ ಪೆಂಪು
ಕಡಲಲಿ ನದಿಯ ಸಂಗಮವು
ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ
ಇದರಾ ಹೆಸರೇ ಪ್ರೀತಿ

ರಾಗಕ್ಕೆ ಸ್ವರವಾಗಿ
ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ

ಚಿತ್ರ: ಹೃದಯ ಪಲ್ಲವಿ
ರಚನೆ:  ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ

Tag: Raagake swarvaagi swarake padavaagi, Ragake swaravagi swarake padavagi


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ