ಚೆಂದ ನಂಜನಗೂಡು
ಚೆಂದ ನಂಜನಗೂಡು
ತಿಂಗ್ಳಾನು ತಿಂಗಳಿಗೆ ಚೆಂದಾ ನಂಜನಗೂಡು
ಗಂಧ ತುಂಬೀದೆ ಗುಡಿಗೆಲ್ಲ||
ಗಂಧ ತುಂಬೀದೆ ಗುಡಿಗೆಲ್ಲ ನಂಜುಂಡ್ನ
ಕಳಸ ತುಂಬೀದೇ ಹಿಡಿಹೊನ್ನು||
ಎಪ್ಪತ್ತು ಗಾವುದಕೆ ನೆಪ್ಪು ನಂಜನಗೂಡು
ಹಿಪ್ಪೇಯ ತೋಪು ಹೊಳೆಸಾಲು||
ಹಿಪ್ಪೇಯ ತೋಪು ಹೊಳೆ ಸಾಲು ಒಳ್ಳೇದೆಂದು
ಅಪ್ಪ ನಂಜುಂಡ ನೆಲೆಗೊಂಡ||
ನಂಜನಗೂಡಲ್ಲಿ ನಮಗ್ಯಾರು ನೆಂಟಾರು
ನಂಜಪ್ಪಸ್ವಾಮಿ ಹಿರಿಯಣ್ಣ||
ನಂಜಪ್ಪಸ್ವಾಮಿ ಹಿರಿಯಣ್ಣ ಇದ್ದಾಗ
ಮುಂದ್ಹೋಗಿ ಹೊರಜಿ ಹಿಡಿದೆವು||
ಎಡದಲಯ್ಯನ ತೇರು ಬಲದಲಮ್ಮನ ತೇರು
ರಾಟೇಳಿ ತೇರು ಕೈತೇರು||
ರಾಟೇಳಿ ತೇರು ಕೈತೇರು ಗೊಂಬೆ ತೇರು
ಹರಿದೋ ನಂಜಯ್ಯ ಎಡಬಲಕೆ||
ಸಾಹಿತ್ಯ: ಜಾನಪದ
Photo Courtesy: Krishna Karthik
Tag: Tinglanu Tingalige chanda nanjanagudu
Tag: Tinglanu Tingalige chanda nanjanagudu
ಕಾಮೆಂಟ್‌ಗಳು