ಮಂಗಳಾ ಎಮ್. ನಾಡಿಗ್ ಸಹೃದಯ ಬರಹಗಾರ್ತಿ ಮತ್ತು ಸಂಘಟನಗಾರ್ತಿ.
ಡಿಸೆಂಬರ್ 26, ಮಂಗಳಾ ಅವರ ಜನ್ಮದಿನ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು. ತಂದೆ ಬಿ. ಎಸ್ ವಸಂತಕುಮಾರ್. ತಾಯಿ ಬಿ. ವಿ. ರಾಧಾ. ಇವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಪ್ಲೋಮಾ ಪಡೆದಿದ್ದಾರೆ.
ಮಂಗಳಾ ಅವರು ಕಥೆ, ಕವನ, ಲೇಖನ, ಹಾಸ್ಯ, ಅಂಕಣ ಹೀಗೆ ಎಲ್ಲಾ ತರಹದ ಬರವಣಿಗೆ ಮಾಡುತ್ತ ಬಂದಿದ್ದಾರೆ. ಕಾಲೇಜು ದಿನಗಳಲ್ಲಿಯೇ ಇವರ ಬರವಣಿಗೆ ಪ್ರಾರಂಭ ಮಾಡಿದ್ದರು. "ಮುಖಪುಟದ ಮೂಲಕ ಹೆಚ್ಚಿನ ಅವಕಾಶಗಳು ಮತ್ತು ಗುರುತಿಸುವಿಕೆ ಸಂದಿದ್ದು, ಸಮಾನ ಮನಸ್ಕರ, ಸಾಹಿತ್ಯ ಗುಂಪುಗಳ, ಅನೇಕ ಹಿರಿಯ ಸಾಹಿತಿಗಳ ಮೆಚ್ಚುಗೆ ಪ್ರೋತ್ಸಾಹಗಳು ತಮಗೆ ಅಮೂಲ್ಯವಾಗಿದೆ" ಎಂದು ಮಂಗಳಾ ಭಾವಿಸುತ್ತಾರೆ. ಇವರ ಬರಹಗಳು ನಾಡಿನ ಅನೇಕ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಇವರ 'ಪ್ರೀತಿಯ ಚಿಟ್ಟೆಯ ಬೆನ್ನೇರಿ' ಎಂಬ ಕವನ ಸಂಕಲನ ಮತ್ತು 'ಸುತ್ತ ಮುತ್ತ' ಲೇಖನಗಳ ಸಂಕಲನ ಪ್ರಕಟಗೊಂಡಿರುವುದಲ್ಲದೆ, ಇವರ ಕವಿತೆಗಳು ಪ್ರಖ್ಯಾತ ಗಾಯಕರ ಧ್ವನಿಯಲ್ಲಿ ಗೀತಗಳಾಗಿಯೂ ನಲಿದು ಧ್ವನಿ ಸುರುಳಿಯಲ್ಲಿ ಮಿಂಚಿವೆ.
ಮಂಗಳಾ ಅವರು ಪ್ರಸ್ತುತ "ಕಥಾ ಕವನಗಳ ಸಂಕಲನ" ಸಾಹಿತ್ಯ ಬಳಗದಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳಾ ಎಮ್. ನಾಡಿಗ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 🌷🙏🌷
Happy birthday Mangala M Nadig🌷🌷🌷
ಕಾಮೆಂಟ್‌ಗಳು