ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏನು ಮಾತು

ಏನು ಮಾತು

ಏನು ಮಾತು, ಏನು ಮಾತೂ
ಏನು ಮಾತಮ್ಮ ಇದು ಸುಳ್ಳು
ಹೋಗಿ, ಹೋಗಿ, ಏನು ಮಾತು...

ನಮ್ಮ ಮನೆಯಲ್ಲಿ ಇಲ್ಲವೇ ಕೆನೆ,
ಯಾತಕೀ ಕೃಷ್ಣನಿಗೆ ನಿಮ್ಮ ಬೆಣ್ಣೆ.
ನಮ್ಮ ಮನೆಯಲ್ಲಿ ಇಲ್ಲವೇ ಮೊಸರೂ
ಯಾತಕೀ ಕೃಷ್ಣನಿಗೆ ಕೆಟ್ಟ ಹೆಸರೂ...
ಏನು ಮಾತು, ಏನು ಮಾತೂ 
ಏನು ಮಾತಮ್ಮ ಇದು ಸುಳ್ಳು
ಹೋಗಿ, ಹೋಗಿ, ಏನು ಮಾತು...

ಹಸು ಕಂದಮ್ಮಗಳೆ ಮನೆಯ  ಬೆಳಕಲ್ಲವೇ
ನೀವವರ ಬಯಕೆ ತೀರಿಪ, ತಾಯಂದಿರೆ ಅಲ್ಲವೇ,
ಅವನ ಕಳ್ಳನೆಂದು ಹೇಳುವುದು ಸರಿಯೇ
ನಿಮ್ಮ ಮನ, ಮನೆತನ ರಕ್ಷಿಸುವ ಹರಿಯೇ
ಏನು ಮಾತು, ಏನು ಮಾತೂ 
ಏನು ಮಾತಮ್ಮ ಇದು ಸುಳ್ಳು

ನಿಮಗೆ ಮತ್ಸರವು ಯಾತಕೇ ನನ್ನ ಕುರಿತು
ಅವನ ಎಣಿಸಬಹುದೇ ಭಕ್ತಿಭಾವ ಮರೆತು
ಮಕ್ಕಳಲ್ಲಿ ಕೃಷ್ಣನೆಂದರೆ, ಸಾಮಾನ್ಯನೇ
ಬಾಯಿಯಲ್ಲಿ ವಿಶ್ವತೋರಿಸಿದ ಮಾನ್ಯನೇ
ಏನು ಮಾತು, ಏನು ಮಾತೂ
ಏನು ಮಾತಮ್ಮ ಇದು ಸುಳ್ಳು 
ಹೋಗಿ ಹೋಗಿ... ಏನು ಮಾತೂ....

(ವಿಶೇಷ ಯಾಚನೆ:  ಚಿಕ್ಕವಯಸ್ಸಿನಿಂದ ಬಹಳಷ್ಟು ವೇಳೆ ಆಕಾಶವಾಣಿಯಲ್ಲಿ ಕೇಳಿದ್ದ ಈ ಹಾಡನ್ನು ನನ್ನ ಮನದಾಳದಿಂದ ಇಲ್ಲಿ ತಂದಿರಿಸಿದ್ದೇನೆ.  ಇದನ್ನು ಹಾಡಿದವರು ವಾಣಿ ಜಯರಾಂ.  ಬರೆದವರು ರಾಘವ ಎಂಬ ಮಹನೀಯರು, ಸಂಗೀತ ನೀಡಿದವರು ಬಿ. ರಜನೀಕಾಂತರಾವ್  ಎಂಬ ಮಸುಕು ಮಸುಕಿನ ನೆನಪು.  ನಾನು ಬರೆದಿರುವುದರಲ್ಲಿ ಅಥವಾ ನನ್ನ ಮಸಕು ಮಸಕಿನ ಈ ಜ್ಞಾನದಲ್ಲಿ ತಪ್ಪಿದ್ದರೆ ದಯವಿಟ್ಟು ನನ್ನನ್ನು ತಿದ್ದಬೇಕಾಗಿ ಯಾಚಿಸುತ್ತೇನೆ).


Tag: Enu matu enu matu enu maatamma mahidu sullu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ