ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ
ಮಾಡಿದೆನೆನ್ನದಿರಾಲಿಂಗಕೆ
ನೀಡಿದೆನೆನ್ನದಿರಾಜಂಗಮಕೆ
ಮಾಡಿದ್ದು ನೀಡಿದ್ದು ಮನದಲಿ ನೆನೆದರೆ
ಪೀಡಿಸಿ ಕಾಡಿತು ಶಿವನಾ ಡಂಗುರ.
ಮಾಡುವ ನೀಡುವ ನಿಜಮನ ಉಳ್ಳವರ ಕೂಡಿಕೊಂಡಿಪ್ಪ ನಮ್ಮ
ಕೂಡಲಸಂಗಯ್ಯ
ಸಾಹಿತ್ಯ: ಬಸವಣ್ಣನವರು
Tag: Maadi maadi kettaro manavillade
ಕಾಮೆಂಟ್‌ಗಳು