ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು
ಜೀವನದನಂತ ದುರ್ಭರ ಭವಣೆ ನೋವುಗಳ
ಕಾವುಗಳ ಮೌನದಲಿ ನುಂಗಿರುವೆನು
ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ
ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆ ನುಡಿ ಕೇಳಿರುವೆನು.
ಗೆಳೆತನದ ಶುಚಿ ರುಚಿಯು ಇದಕೂ ಮಿಗಿಲಾಗಿಹುದು
ಎಂಬ ಸಾಹಸ ಮಾಡೆ ದೋಷವೇನು?
ಕಂಡ ಕಂಡವರೇನು ಬಲ್ಲರಿದನು ಉಂಡವನು ಕಂಡಿಹನು ಇದರ ಹದನು
ಹೇಗೋ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್ಪು
ಆಗು ಹೋಗುಗಳಿಗೆ ಬಾಗದಂತೆ ಸುಖಕೆ ಸಂತಸಪಟ್ಟು
ದುಃಖದಲಿ ಸಹಭಾಗಿಯಾಗೆ ಜೀವನರಸದ ಪಾಕದಂತೆ
ಸರಸ ವಿರಸವನೆಲ್ಲ ಅಪ್ಪುಕಯ್ದು
ಬಾಳುವರು ಗಂಧದೊಲು ಜೀವ ತೇಯ್ದು.
ಇನಿವಿರಿದು ಗೆಳೆತನದ ಗುಟ್ಟಿಹುದು ನಲ್ಗೆಳೆಯ
ಬಿನ್ನಣದ ನುಡಿಯಲ್ಲ ಎದೆಯ ಮೀಟಿ
ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ
ಚದುರಂಗ ಬಲವಿದಕೆ ಯಾವ ಸಾಟಿ
ಸಾಹಿತ್ಯ: ಚನ್ನವೀರ ಕಣವಿ
Tag: Geletanada suvishala aladadi pasarisiha, Geletanada suvishaala aaladadi pasarisiha
Tag: Geletanada suvishala aladadi pasarisiha, Geletanada suvishaala aaladadi pasarisiha
ಗೆಳೆತನದ ಈದಿನ ಮನನ ಯೋಗ್ಯ ಕವನ. ಲಭ್ಯವಾಗಿಸಿದ್ದಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಗೆಳೆತನ ಹಾಡು ಕೇಳಿಸಿ ರಾಗ ಬೇಕಿತ್ತು
ಪ್ರತ್ಯುತ್ತರಅಳಿಸಿಇದರ ಸಾರಾಂಶ ಬೇಕಿತ್ತು
ಪ್ರತ್ಯುತ್ತರಅಳಿಸಿ