ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾರದೆ ದಯೆ ತೋರಿದೆ

ಶಾರದೆ ದಯೆ ತೋರಿದೆ
ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ

ನಾ ಮುತ್ತಾದೆ

ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ



ಹಾಲ ಬೆಳಕಿನಲಿ ಬಿಳಿಯ ಕಮಲದಲಿ

ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ
ಬೆಳ್ಳಿ ವೀಣೆಯನ್ನು ನುಡಿಸಿ
ನಿನ್ನ ಕಂಗಳ ಬೆಳಕನು
ನನ್ನ ಕಂಗಳಲ್ಲಿ ತುಂಬಿದೆ
ನಿನ್ನ ಕಂಗಳ ಬೆಳಕನು
ನನ್ನ ಕಂಗಳಲ್ಲಿ ತುಂಬಿದೆ
ಏಳು ಮಗುವೆ ಮೇಲೇಳು ಎಂದು
ಹೊಸ ಬಾಳು ತಂದೆಯಮ್ಮ
ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ



ಅಂಧಕಾರದಲಿ ನೊಂದು ಬಳಲುತಿರೆ

ಬಂದು ಕೈಯ್ಯ ಹಿಡಿದೆ
ಕಂದ ಏಕಳುವೆ
ಮುಂದೆ ದಾರಿ ಇದೆ
ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ
ನಾನೆಂದೊ ಮಾಡಿದ ಪೂಜೆಯೊ
ತಂದೆ ತಾಯಿಯ ಪುಣ್ಯವೊ
ನಾನೆಂದೊ ಮಾಡಿದ ಪೂಜೆಯೊ
ಇಂದು ನಿನ್ನ ಕೃಪೆಯಿಂದ
ನಾನು ಆನಂದ ಪಡೆದೆನಮ್ಮ
ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ
ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ
ನಾ ಮುತ್ತಾದೆ
ಶಾರದೆ ಶಾರದೆ ಶಾರದೆ



ಸಾಹಿತ್ಯ: ಆರ್. ಎನ್. ಜಯಗೋಪಾಲ್

ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ



ಗಾಯನ: ಕೆ. ಜೆ. ಏಸುದಾಸ್


Tag: Sharade Daye Toride



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ