ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರ್ನಾಟಕದ ಇತಿಹಾಸದಲಿ

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ, ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ 




ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಅನುಗ್ರಹಗೈದ ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನು ಎಲ್ಲೂ ಚೆಲ್ಲಿ;
ವಿಜಯದ ಕಹಳೆಯ ಊದಿದರು,
ವಿಜಯನಗರ ಸ್ಥಾಪನೆ ಮಾಡಿದರು
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ

ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ;
ಕನ್ನಡ ಬಾವುಟ ಹಾರಿಸಿದ
ಮಧುರೆವರೆಗೂ ರಾಜ್ಯವ ಹರಡಿಸಿದ
ಕರ್ನಾಟಕದ ಇತಿಹಾಸದಲಿ

ಸಂಗೀತ ನಾಟ್ಯಗಳ ಸಂಗಮವಿಲ್ಲೇ,
ಶಿಲ್ಪ ಕಲೆಗಳ ತಾಣವಿದೇ.
ಭುವನೇಶ್ವರಿಯ ತವರೂರಿದೆ;
ಯತಿಗಳ ದಾಸರ ನೆಲೆ ನಾಡಿಲ್ಲೇ;
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿಯಿದು.
ಕನ್ನಡ ಭೂಮಿ, ಕನ್ನಡ ನುಡಿಯು,
ಕನ್ನಡ ಕೀರ್ತಿ ಎಂದೆಂದೂ ಬಾಳಲಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ....

ಚಿತ್ರ: ಕೃಷ್ಣ ರುಕ್ಮಿಣಿ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಕೆ. ವಿ. ಮಹದೇವನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ