ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಕ್ರಾಂತಿ ಸುಖ


ಹೊಳೆಯಲ್ಲಿ ನೀರು ತುಂಬಿ
ಹೊಲದಲ್ಲಿ ಬೆಳೆ ತುಂಬಿ
ಊರೂರಿನ ಗುಡಿ ಮನೆತುಂಬಿ 
ಹೂವಿನ ಗೆಜ್ಜೆ ಮಾತಾಡುತಾವೆ

ಊರೂರಿನ ಗುಡಿ ಮನೆತುಂಬಿ ಜನತುಂಬಿ
ಸಂಕ್ರಾಂತಿ ಬಂತು ಸಿರಿತುಂಬಿ
ಸಂಕ್ರಾಂತಿ ಹಬ್ಬದಲ್ಲಿ ಸಂಭ್ರಮವೇನಮ್ಮ
ದೇವೇಂದ್ರನೈಭೋಗ ಧರೆಯಲ್ಲಿ

ದೇವೇಂದ್ರನೈಭೋಗ ಧರೆಯಲ್ಲಿ ನೋಡುಬಾರೆ
ಬೆಳೆದು ಬೀಗ್ಯಾಳೆ ಭೂಮಿತಾಯಿ
ಭೂಮಿಯು ನಮ್ಮ ತಾಯಿ ತಂದೇಯು ಬಸವಣ್ಣ
ಅವರಿತ್ತ ಸಿರಿಯ ನೋಡ ಬನ್ನಿ

ಸುಗ್ಗಿ ಬಂದಿದೆ ಬನ್ನಿ ಹಿಗ್ಗ ತಂದಿದೆ ಬನ್ನಿ
ಸಗ್ಗವಾಗಿದೆ ಭೂಮಿ ನೋಡ ಬನ್ನಿ
ಎಳ್ಳು ಬೆಲ್ಲವ ಕೊಟ್ಟ ಒಳ್ಳೆ ಬಾಳನು ಕೊಟ್ಟ
ಎಲ್ಲರಿಗು ಸಂಪತ್ತ ಶಿವಕೊಟ್ಟ

ಗೊನೆಯಿಳ್ಸಿ ತಂದ ಬತ್ತ ಕುಟ್ಟೀದ ಹೊಸಅಕ್ಕಿ
ಉಕ್ಕೀಸಿ ಹೆಚ್ಚಾದ ಬೆಲ್ಲದನ್ನ
ಉಕ್ಕೀಸಿ ಹೆಚ್ಚೀದ ಬೆಲ್ಲದನ್ನ ಬಸವಯ್ಗೆ
ಪಡುಸೋಗ ಸಂಕ್ರಾಂತಿ ಸುಖವಾಯ್ತು

(ಜಾನಪದ)

Tag: Sankranthi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ