ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಂಗಾ ಯಮುನಾ ಸಂಗಮ

ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ ಈ ಪ್ರೇಮಾ
ಕೆನೆ ಹಾಲೂ ಜೇನೂ ಸೇರಿದಂತೇ ಈ ಬದುಕು
ಕೆನೆ ಹಾಲು ಜೇನು ಸೇರಿದಂತೇ ಈ ಬದುಕು

ಅನುದಿನ ಸಂತೋಷ ಅನುಕ್ಷಣ ಉಲ್ಲಾಸ
ಗೆಳೆಯಾ ನಿನ್ನಾ ಸೇರಿ,  ಪ್ರೇಮದ ಆವೇಶ
ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
ದಿನವೂ ನೋಡೀ ನೋಡೀ, ಒಲವಿನ ತುಂಟಾಟ
ಅರಿತೂ ಬೆರೆತೂ,
ಕೆನೆ ಹಾಲೂ ಜೇನೂ ಸೇರಿದಂತೇ ಈ ಬದುಕು
ಕೆನೆ ಹಾಲು ಜೇನು ಸೇರಿದಂತೇ ಈ ಬದುಕು
ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ ಈ ಪ್ರೇಮಾ

ಬಾಳಲಿ ಇನ್ನೆಂದೂ ಚಿಂತೆಯ ಮಾತಿಲ್ಲ
ಗೆಳತೀ ಏನೇ ಕೇಳೂ ಕೊಡುವೇ ನಾನೆಲ್ಲಾ
ಕೇಳೆನು ಏನನ್ನೂ, ಬಯಸೆನು ಇನ್ನೇನೂ
ಗೆಳೆಯಾ ಎಂದೂ ಹೀಗೇ, ಪ್ರೀತಿಸು ನನ್ನನು
ನಿನ್ನಾ ಸೇರೀ,
ಕೆನೆ ಹಾಲೂ ಜೇನೂ ಸೇರಿದಂತೇ ಈ ಬದುಕು
ಕೆನೆ ಹಾಲು ಜೇನು ಸೇರಿದಂತೇ ಈ ಬದುಕು
ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ ಈ ಪ್ರೇಮಾ
ಕೆನೆ ಹಾಲೂ ಜೇನೂ ಸೇರಿದಂತೇ ಈ ಬದುಕು
ಕೆನೆ ಹಾಲು ಜೇನು ಸೇರಿದಂತೇ ಈ ಬದುಕು

ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಉಪೇಂದ್ರ ಕುಮಾರ್
ಗಾಯನ: ರಾಜ್ ಕುಮಾರ್ ಮತ್ತು ಎಸ್. ಜಾನಕಿ




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ